ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪ್ರೀತಿಗಾಗಿ ವಿಷ ಕುಡಿದ ಪ್ರೇಮಿಗಳು: ಹಾರಿ ಹೋಯಿತು ಜೋಡಿ ಹಕ್ಕಿಗಳ ಪ್ರಾಣ ಪಕ್ಷಿ !

ಹುಬ್ಬಳ್ಳಿ: ನಾಳೆ ಬೆಳಗಾದರೆ ಆ ಮನೆಯಲ್ಲಿ ಮದುವೆ ಕಾರ್ಯ ನಡೆಯಬೇಕಿತ್ತು.ಆದರೆ ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಈಗ ಆಕ್ರಂದನ ಮುಗಿಲು ಮುಟ್ಟಿದೆ. ಊರಿಗೆ ಊರೆ ಶೋಕ ಸಾಗರದಲ್ಲಿ ಮುಳುಗಿದೆ. ಆದರೆ, ಅಸಲಿಗೆ ಇಲ್ಲಿ ಆಗಿದ್ದಾದರೂ ಏನೂ. ಬನ್ನಿ, ಹೇಳ್ತಿವಿ ಈ ಕಣ್ಣೀರ ಕಥೆ.

ಆತ ಪಿ.ಎಸ್.ಐ ಆಗಬೇಕು ಅಂತ ಕನಸು ಕಂಡಿದ್ದ. ಬಡ ಕುಟುಂಬದಲ್ಲಿ ಹುಟ್ಟಿ ಏನಾದರು ಸಾಧನೆ ಮಾಡಬೇಕು ಅಂತ ಪರೀಕ್ಷೆ ಸಹ ಬರೆದು ಜೀವನದ ಭವಿಷ್ಯದ ಬಗ್ಗೆ ಎದುರು ನೋಡುತ್ತಿದ್ದ. ಆದರೆ ಅವನ ಒಂದು ನಿರ್ಧಾರ ಇದೀಗ ಇಡೀ ಕುಟುಂಬವೇ ಕಣ್ಣೀರು ಹಾಕುವಂತೆ ಮಾಡಿದೆ.

ಹೀಗೆ ಫೋಟೋದಲ್ಲಿ ಕಾಣುವ ಇಬರಿಬ್ಬರು ಅಮರ ಪ್ರೇಮಿಗಳಾಗಿದ್ದಾರೆ. ಪ್ರೀತಿಯಲ್ಲಿ ಮುಳುಗಿ ಜೀವನ ಪೂರ್ತಿ ಒಂದಾಗಿ ಬದುಕಿ ಬಾಳುವ ಕನಸು ಕಂಡಿದ್ದ ಇವರು, ಇದೀಗ ಆತ್ಮಹತ್ಯೆ ಮಾಡಿಕೊಂಡು ಬದುಕಿಗೆ ಫುಲ್ ಸ್ಟಾಫ್ ಇಟ್ಟುಕೊಂಡಿದ್ದಾರೆ. ಹೌದು. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ತಡಹಾಳ ಗ್ರಾಮದ ಸಾವಿತ್ರಿ ಮತ್ತು ಬಸವರಾಜ ಹಲವು ವರ್ಷಗಳಿಂದ ಪ್ರೀತಿಯಲ್ಲಿ ಮುಳುಗಿದ್ದರು. ಜಾತಿ ಬೇರೆಯಾದರೇನು ಪ್ರೀತಿ ಮುಂದೆ ಅದೆಲ್ಲವೂ ಏನು ಅಲ್ಲ ಅಂತ ನಂಬಿದ್ದ ಪ್ರೇಮಿಗಳು ಇನ್ನೇನು ಮದುವೆ ಆಗುವ ಸನಿಹದಲ್ಲಿದ್ದರು.

ಆದರೆ ಅನ್ಯಜಾತಿಯ ಹುಡುಗನನ್ನು ಒಪ್ಪದ ಸಾವಿತ್ರಿ ಮನೆಯವರು ಬಸವರಾಜ ಮತ್ತು ಸಾವಿತ್ರಿ ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಸಾವಿತ್ರಿಯನ್ನು ನಾಳೆಯೇ ಬೇರೆಯವರೊಟ್ಟಿಗೆ ಮದುವೆ ಮಾಡುವುದಕ್ಕೆ ಎಲ್ಲ ತಯಾರಿಯನ್ನು ಮಾಡಿಕೊಂಡಿದ್ದರು. ಆದರೆ ಆ ಮದುವೆ ಮನೆಯಲ್ಲಾಗಿದ್ದೆ ಬೇರೆ. ಪ್ರೀತಿಸಿದವನ ಬಿಟ್ಟು ಮತ್ತೊಬ್ಬನನ್ನು ವರಿಸಲು ಆಕೆ ಸಿದ್ದವಿರಲಿಲ್ಲ.

ಹಲವು ವರ್ಷಗಳಿಂದ ಪ್ರೀತಿ ಮಾಡಿದ್ದ ಸಾವಿತ್ರಿ ಮತ್ತು ಬಸವರಾಜ್ ಹೇಗಾದರು ಮಾಡಿ ಮದುವೆ ನಿಲ್ಲಿಸಬೇಕು ಅಂತ ಪ್ಲಾನ್ ಮಾಡಿದ್ದರು. ಆದರೆ ಇವರಂದು ಕೊಂಡಂತೆ ಆಗಲೇ ಇಲ್ಲ. ಹೀಗಾಗಿಯೇ ಇಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮೂಲಕವಾದರೂ ಸಾವಿನಲ್ಲಿ ಒಂದಾಗುವ ನಿರ್ಧಾರಕ್ಕೆ ಬಂದಿದ್ರು. ಹೀಗಾಗಿಯೇ ನಿನ್ನೆ ಸಂಜೆ ಇಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ರು. ವಿಷ ಸೇವಿಸಿ ಕೆಲವೇ ಕ್ಷಣಗಳಲ್ಲಿ ಇಬ್ಬರು ಪ್ರಜ್ಞೆ ತಪ್ಪಿದ್ದಾರೆ. ಮೊದಲು ಇಬ್ಬರನ್ನು ನವಲಗುಂದ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಪರಿಸ್ಥಿತಿ ಕೈಮೀರಿತ್ತು. ಹುಬ್ಬಳ್ಳಿಯ ಕಿಮ್ಸ್ ಗೆ ತರುವ ಮಾರ್ಗ ಮಧ್ಯದಲ್ಲಿ ಸಾವಿತ್ರಿ ಕೊನೆಯುಸಿರು ಎಳೆದಿದ್ದಾಳೆ. ಇನ್ನು ಚಿಂತಾಜನಕ ಸ್ಥಿತಿಯಲ್ಲಿದ್ದ ಬಸವರಾಜ ಇಂದು ಬೆಳಿಗ್ಗೆ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಸಾವನ್ನಪ್ಪಿದ್ದಾನೆ.

ಪ್ರೀತಿ ಮಾಡಿದ ಜೋಡಿಗಳು ಸಾವಿನ ಮೂಲಕ ಈಗ ಒಂದಾಗಿದ್ದಾರೆ. ಆದರೆ ಅವರನ್ನು ಹೆತ್ತು ಹೊತ್ತು ಬೆಳೆಸಿದ್ದ ತಂದೆ ತಾಯಿಯ ಆಕ್ರಂದನ ಮಾತ್ರ ಮುಗಿಲು ಮುಟ್ಟಿದೆ. ಪ್ರೀತಿಯಲ್ಲಿ ಮುಳುಗಿದ್ದ ಯುವ ಜೋಡಿಗಳು ದುರಂತವಾಗಿ ಸಾವನ್ನಪ್ಪಿದ್ದರಿಂದ ಇಡೀ ಗ್ರಾಮವೇ ಶೋಕ ಸಾಗರದಲ್ಲಿ ಮುಳುಗಿದೆ.

Edited By : Nagesh Gaonkar
Kshetra Samachara

Kshetra Samachara

06/04/2022 08:49 am

Cinque Terre

42.27 K

Cinque Terre

8

ಸಂಬಂಧಿತ ಸುದ್ದಿ