ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕೊನೆಗೂ ರಾಘವೇಂದ್ರ ಕಟ್ಟಿ ಬಂಧನ: ಕೋಟಿಗಟ್ಟಲೇ ನಡೆದಿದೆ ಹಗರಣ.!

ಧಾರವಾಡ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಒಂದು ದೇಶ ಒಂದು ಪಠ್ಯ (ಒನ್ ನೇಷನ್ ಒನ್ ಸಿಲ್ಯಾಬಸ್) ಹೆಸರಿನಲ್ಲಿ ವಿವಿಧ ಹುದ್ದೆಗೆ ತರಬೇತಿ ನೀಡಿ ಆನಂತರ ಕೇಂದ್ರ ಸರ್ಕಾರದಲ್ಲಿ ಉನ್ನತ ಮಟ್ಟದ ನೌಕರಿ ಕೊಡಿಸುವುದಾಗಿ ಆಮಿಷ ಒಡ್ಡಿ ಕೋಟಿಗಟ್ಟಲೇ ಹಗರಣ ನಡೆಸಿದ್ದಾರೆ ಎನ್ನಲಾದ ಧಾರವಾಡದ

ಎಸ್‌ಜಿಎಸ್ಎಸ್‌ಎಚ್ಆರ್ ಕನ್ಸಲ್ಟೆನ್ಸಿ ಎಂಡಿ ರಾಘವೇಂದ್ರ ಕಟ್ಟಿ ಹಾಗೂ ಮ್ಯಾನೇಜರ್ ಪೂರ್ಣಿಮಾ ಸೊಪ್ಪಿಮಠ ಅವರನ್ನು ಉಪನಗರ ಠಾಣೆ ಪೊಲೀಸರು ಕೊನೆಗೂ ಬಂಧಿಸಿದ್ದಾರೆ.

ಎಸ್‌ಜಿಎಸ್‌ಎಸ್‌ಎಚ್‌ಆರ್ ಸಂಸ್ಥೆ ಮೂಲಕ ರಾಘವೇಂದ್ರ ಕಟ್ಟಿ ಅವರು ಸರ್ಕಾರಿ ನೌಕರಿ ಕೊಡಿಸುವುದಾಗಿ ಅನೇಕ ಅಭ್ಯರ್ಥಿಗಳಿಂದ ಲಕ್ಷಗಟ್ಟಲೇ ಹಣ ಪಡೆದಿದ್ದಾರೆ. ಆದರೆ, ಕೊನೆಗೆ ನೌಕರಿಯನ್ನೂ ಕೊಡಿಸದೇ ಕೊಟ್ಟ ಹಣವನ್ನೂ ವಾಪಸ್ ಕೊಡದೇ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿ ಕಟ್ಟಿ ವಿರುದ್ಧ ಹಣ ಕೊಟ್ಟ ಅಭ್ಯರ್ಥಿಗಳು ಹಾಗೂ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಅವರ ನೇತೃತ್ವದಲ್ಲಿ ಪ್ರತಿಭಟನೆಗಳು ಸಹ ನಡೆದಿದ್ದವು.

ಅಲ್ಲದೇ ಹಣ ಕೊಟ್ಟ ನಾಲ್ಕು ಜನ ಅಭ್ಯರ್ಥಿಗಳು ರಾಘವೇಂದ್ರ ಕಟ್ಟಿ ಹಾಗೂ ಪೂರ್ಣಿಮಾ ಸೊಪ್ಪಿಮಠ ವಿರುದ್ಧ ನಾಲ್ಕು ಪ್ರತ್ಯೇಕ ವಂಚನೆ ಪ್ರಕರಣ ದಾಖಲಿಸಿದ್ದರು. ಇದೀಗ ಇಬ್ಬರನ್ನೂ ಬಂಧಿಸಿರುವ ಪೊಲೀಸರು, ಸುದೀರ್ಘ ವಿಚಾರಣೆ ನಂತರ ಅವರನ್ನು ವೈದ್ಯಕೀಯ ತಪಾಸಣೆಗಾಗಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.

Edited By : Shivu K
Kshetra Samachara

Kshetra Samachara

01/04/2022 10:25 pm

Cinque Terre

64.61 K

Cinque Terre

3

ಸಂಬಂಧಿತ ಸುದ್ದಿ