ಅಳ್ನಾವರ: ಎರಡು ಬೈಕ್‌ಗಳ ನಡುವೆ ಅಪಘಾತ ಸಂಭವಿಸಿ ಓರ್ವ ಮೃತಪಟ್ಟ ಘಟನೆ ಅಳ್ನಾವರ-ಧಾರವಾಡ ರಸ್ತೆಯ ಕಡಬಗಟ್ಟಿ ಗ್ರಾಮದ ಹತ್ತಿರ ಸೋಮವಾರ ಸಂಜೆ ಸುಮಾರು 7:30ರ ಸಮಯದಲ್ಲಿ ನಡೆದಿದೆ.
ಇಶರತ್ ಅಸಲಂ ಸೊಡೆವಾಲೆ (29) ಮೃತ ದುರ್ದೈವಿ. ಇನ್ನು ಅಸಲಂ ಎಂಬುವರಿಗೆ ಗಂಭೀರ ಗಾಯಗಳಾಗಿವೆ. ಈ ಘಟನೆ ಪರಶುರಾಮ ಸಂಬಾಜಿ ಎಂಬಾತನ ವಿರುದ್ಧ ಅಳ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರಶುರಾಮ ಅತಿ ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಪರಶುರಾಮ ಹಾಗೂ ಆತನ ಬೈಕ್ ಹಿಂದೆ ಕುಳಿತಿದ್ದ ಸಬಸ್ಟಿನ್ ಅಂತೋನಿ ಫರ್ನಾಂಡಿಸ್ ಇಬ್ಬರಿಗೂ ಗಾಯಗಳಿವೆ. ಅವರನ್ನು ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
Kshetra Samachara
29/03/2022 12:55 pm