ಅಳ್ನಾವರ : ಕಳೆದ ವಾರ ತಾಲೂಕಿನ ಅರವಟಗಿ ಗ್ರಾಮದಲ್ಲಿ ಗ್ಯಾರೇಜ್ ವೊಂದರಲ್ಲಿ 10 ನೀರಿನ ಪಂಪ್ ಹಾಗೂ 7 ಮೋಟರ್ ಗಳ ಕಳ್ಳತನವಾಗಿತ್ತು. ಈ ಸಂಬಂಧ ಓರ್ವ ಆರೋಪಿಯನ್ನು ಬಂಧಿಸಲಾಗಿದೆ.
ಅಳ್ನಾವರದ ಕಡಬಗಟ್ಟಿ ಕ್ರಾಸ್ ಬಳಿ ಆನಂದ ಭೀಮಪ್ಪ ಗೊಲ್ಲರ ಎಂಬಾತನನ್ನು ಬಂಧಿಸಲಾಗಿದೆ.ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಬಂಧಿತನಿಂದ ಅಶೋಕ್ ಲೈಲೆಂಡ್ ವಾಹನ,ಸುಮಾರು 130 ಸೆಂಟ್ರಿಂಗ್ ಪ್ಲೇಟ್ ಗಳು,ಒಂದು ಬೈಕ್ ಹಾಗೂ 60 ಸಾವಿರ ರೂಪಾಯಿ ನಗದು ವಶ ಪಡಿಸಿಕೊಳ್ಳಲಾಗಿದೆ.
ಚಂದ್ರಶೇಖರ ಕಲ್ಲಪ್ಪ ಅಮ್ಮನಗಿ ಎಂಬುವರ ಗ್ಯಾರೇಜ್ ನಲ್ಲಿ ಕಳ್ಳತನ ನಡೆಸಲಾಗಿತ್ತು.ಬಂಧಿತ ಆರೋಪಿ ಧಾರವಾಡ ಮೂಲದವನಾಗಿದ್ದಾನೆ ಎಂದು ತಿಳಿದುಬಂದಿದೆ.
Kshetra Samachara
26/03/2022 12:36 pm