ನವಲಗುಂದ : ನಮಸ್ಕಾರೀ ನವಲಗುಂದ ತಹಶೀಲ್ದಾರರೇ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳೇ ಹಂಗ್ ನಮ್ಮ ಯಮನೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೇ,,
ಯಮನೂರು ಚಾಂಗದೇವರ ಜಾತ್ರೆಗೆ ಬರುವಂತಹ ಭಕ್ತರು ಆಮೇಲೆ ನವಲಗುಂದ ವಿಜಯಪುರ ರಾಜ್ಯ ಹೆದ್ದಾರಿಯ ಮೇಲೆ ಓಡಾಡೋ ಲಾರಿ ಸೇರಿದಂತೆ ಎಲ್ಲಾ ವಾಹನಗಳಿಗೆ ಚಾಂಗದೇವರ ದೇವಸ್ಥಾನದ ಅಭಿವೃದ್ಧಿ ಹೆಸರಲ್ಲಿ ತಲಾ ಒಂದು ವಾಹನಕ್ಕೆ 30 ರೂಪಾಯಿ ಹಂಗ್.
ಮಾರ್ಚ್ 19 ರಿಂದ ಇವತ್ತಿನ್ ಮಾಟಾ ಸುಂಕ ವಸೂಲಿ ಮಾಡೋದು ಯಾವ ನ್ಯಾಯ ಹೇಳ್ರಿ ?.
ಅದು ನೋಡ್ರಿಲ್ಲೇ ಹೆದ್ದಾರಿ ಮೇಲೆ ವೇಗವಾಗಿ ಬರೋ ವಾಹನಗಳಿಗೆ ಹಿಂಗ್ ಅಡ್ಡ ಕೈ ನಿಲ್ಲಿಸೋದು, ಹಣ ಕೇಳೋದು, ಎಷ್ಟರ ಮಟ್ಟಿಗೆ ಸರಿ ?
ಈ ಕೆಲಸಕ್ಕೆ ನಮ್ಮ ಪೊಲೀಸರು ಬ್ಯಾರಿಕೇಡ್ ಸಹಿತ ಬಳಸಿಕೊಂಡು, ಒಂದು ಟೆಂಟ್ ಹಾಕ್ಕೊಂಡು ಈ ಪಾಟಿ ಹೇ ರೊಕ್ಕಾ ಕೊಡ್ರಿ..! ರೊಕ್ಕಾ ಕೊಡ್ರಿ.! ಕೊಡಬೇಕ್ ಅಂದ್ರ ಕೊಡಬೇಕು ಎಲ್ಲಾರು ಕೊಟ್ಟಾರು ಅಂತ ಹೇಳಿ ಒಂದ್ ವಯಸ್ಸಿನ್ ಹುಡುಗ್ರು ವಾಹನ ಸವಾರರಿಗೆ ಅವಾಜ್ ಹಾಕ್ ಕತ್ತಾರ್ ರೀ ಪಾ.
ಮತ್ತ್ ಈ ಕೆಲಸಕ್ಕ್ ತಹಶೀಲ್ದಾರ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ, ಗ್ರಾಮ ಪಂಚಾಯಿತಿ ಪಿಡಿಓ ಎಲ್ಲಾರು ಸಮ್ಮುಖದಾಗ ಟೆಂಡರ್ ಕರೆದು ಅಗ್ಗದಿ ಜಾಸ್ತಿ ಅಂದ್ರ್ 51.111 ರೂಪಾಯಿಗೆ ಟೆಂಡರ್ ಮಾಡ್ಯಾರ್ ಮಾನ್ಯ ಜಿಲ್ಲಾಧಿಕಾರಿಗಳೇ ಇದು ಸರಿಯಾ ನೀವೇ ಹೇಳಿ.
ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ತಹಶೀಲ್ದಾರ ಅವರಿಗೆ ಕರೆ ಮಾಡಿದ್ರ ಅವ್ರ ಎನ್ ಹೇಳ್ತಾರ್ ಕೇಳ್ರಿ.
ಆ ಮ್ಯಾಗ್ ನವಲಗುಂದ ಸಿಪಿಐ ಅವರಿಗೆ ಕಾಲ್ ಮಾಡಿ ಸಾಹೇಬ್ರೆ, ನಿಮ್ಮ ಬ್ಯಾರಿಕೇಡ್ ಬಳಸಿ ರೊಕ್ಕಾ ಕೇಳಕತ್ತಾರ್ ಅಂದ್ವಿ ಅವ್ರು ಏನ್ ಹೇಳಿದ್ರು ಕೇಳ್ರಿ.
ಕೇಳಿದ್ರಲ್ಲಾ ಜಿಲ್ಲಾಧಿಕಾರಿಗಳೇ ರಾಜ್ಯ ಹೆದ್ದಾರಿಯ ಮೇಲೆ ಜಾತ್ರೆ ಟೆಂಡರ್ ಕರೆದು ರೊಕ್ಕಾ ವಸೂಲಿ ಮಾಡುವಂತಹ ನಿಯಮ ಇದೆಯಾ ? ಇದ್ರೇ ಅದು ಯಮನೂರಪ್ಪನ ಜಾತ್ರೆಗೆ ಮಾತ್ರಾನಾ ? ಸರಕಾರದ ನಿಯಮಾವಳಿ ಗಾಳಿಗೆ ತೂರಿ ಟೆಂಡರ್ ಕೊಡಲಾಗಿದೆ. ಯಾವುದೇ ಸಮರ್ಪಕ ದಾಖಲೆ ಇಲ್ಲ.
ಜನರಿಗೆ ನಮಗೆ ಎಲ್ಲರಿಗೂ ದೇವರ ಮೇಲೆ ಭಕ್ತಿ ಇದೆ, ಆ ಭಕ್ತಿ ಪವಾಡ ಪುರುಷ ಚಾಂಗದೇವರ ಜಾತ್ರೆಯಲ್ಲಿ ಹಣ ಕೀಳಲು ಮುಂದಾಗದಿರಲಿ ಎನ್ನುವುದು ಪಬ್ಲಿಕ್ ನೆಕ್ಸ್ಟ್ ಆಶಯ.
Kshetra Samachara
25/03/2022 11:15 pm