ಹುಬ್ಬಳ್ಳಿ: ಕಳ್ಳರು ರಾತ್ರಿ ವೇಳೆ ಮನೆಗೆ ನುಗ್ಗಿ ಹಣ ಮತ್ತು ಮೊಬೈಲ್ ಅನ್ನು ಕದ್ದು ಪರಾರಿಯಾದ ಘಟನೆ ನಗರದ ನೇಕಾರ ನಗರದ ಗಣೇಶ ಕಾಲೋನಿಯ 1ನೇ ಕ್ರಾಸ್‌ನಲ್ಲಿ ನಡೆದಿದೆ.
ಶೀತಲ ರಾಶಿನಕರ್ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆಯಲ್ಲಿ ಯಾರು ಇಲ್ಲದ ಸಮಯವನ್ನು ನೋಡಿದ ಕಳ್ಳರು, ಕಿಟಕಿಯಿಂದ ಬಾಗಿಲ ತೆರೆದು ಮನೆಯಲ್ಲಿದ್ದ 20 ಸಾವಿರ ರೂ. ಹಣ ಮತ್ತು 32 ಸಾವಿರ ಮೌಲ್ಯದ ಎರಡು ಮೊಬೈಲ್‌ಗಳನ್ನು ಕಳ್ಳತನ ಮಾಡಿದ್ದಾರೆ. ಈ ಕುರಿತು ಕಸಬಾಪೇಟ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
Kshetra Samachara
25/03/2022 10:43 am