ಹುಬ್ಬಳ್ಳಿ: ಹೆಂಡತಿ ಮೇಲೆ ಮಸನೋ ಇಚ್ಛೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಮಾರಣಾಂತಿಕವಾಗಿ ಹಲ್ಲೆಗೈದ ಇಜಾಜ್ ಹಿಂದೂ ಯುವತಿಯನ್ನು ಪ್ರೀತಿ ಮಾಡುವ ನಾಟಕವಾಡಿ ಮದುವೆ ಆಗಿದ್ದೇ ಲವ್ ಜಿಹಾದ್ ಉದ್ದೇಶಕ್ಕಾಗಿ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಯೆಸ್...ಮಾರಣಾಂತಿಕವಾಗಿ ಹಲ್ಲೆಗೊಳಗಾದ ಅಪೂರ್ವ ಅವತ್ತು ನಡೆದ ಘಟನೆಯ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಮುಂದೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ವಿದ್ಯಾಭ್ಯಾಸಕ್ಕೆಂದು ಹುಬ್ಬಳ್ಳಿಯಲ್ಲಿ ನಾನು ಆಗಾಗ ಇಜಾಜ್ ಆಟೋದಲ್ಲಿ ಹೋಗುತ್ತಿದ್ದೆ. ಮುಂದೊಮ್ಮೆ ಆತ ನನ್ನ ಮೇಲೆ ರೇಪ್ ಮಾಡಿದ. ಈ ಅತ್ಯಾಚಾರದ ವೀಡಿಯೋ ಇಟ್ಟುಕೊಂಡು ಬ್ಲಾಕ್‌ಮೇಲ್ ಮಾಡೋಕೆ ಶುರು ಮಾಡಿದ. ಮದುವೆ ಆಗದಿದ್ರೆ ನಿನ್ನ ತಾಯಿ ಮತ್ತಿತರರಿಗೆ ಈ ವಿಷಯ ಹೇಳುವ ಜೊತೆಗೆ ಎಲ್ಲವನ್ನೂ ಬಹಿರಂಗಪಡಿಸೋದಾಗಿ ಎಚ್ಚರಿಸಿದ. ಈ ಕಾರಣಕ್ಕೆ ಅನಿವಾರ್ಯವಾಗಿ ನಾನು ಇಜಾಜ್‌ನನ್ನು ಮದುವೆ ಆಗೋದಕ್ಕೆ ಒಪ್ಪಿಕೊಂಡೆ. ವಿಜಯಪುರದಲ್ಲಿ ಕರೆದೊಯ್ದು ನನ್ನನ್ನು ಇಜಾಜ್ ಮದುವೆ ಆದ. ಮದುವೆ ಆಗುತ್ತಿದ್ದಂತೆಯೇ ತನ್ನ ಮತ್ತೊಂದು ಮುಖ ತೋರಿಸಲಾರಂಭಿಸಿದ. ತನ್ನ ಧರ್ಮಕ್ಕೆ ಧರ್ಮಾಂತರ ಮಾಡಿಕೊಂಡರಷ್ಟೇ ಸಂಸಾರ ಮಾಡುತ್ತೇನೆ ಅಂದ. ಅನಿವಾರ್ಯವಾಗಿ ನಾನು ಧರ್ಮಾಂತರಗೊಂಡೆ. ಆದರೆ ಬುರ್ಕಾ ಹಾಕಬೇಕು, ಹಿಜಾಬ್ ಹಾಕಿಕೊಳ್ಳಬೇಕೆಂದು ಪೀಡಿಸುತ್ತಿದ್ದ. ನನ್ನ ಹೆಸರನ್ನು ಅರ್ಫಾ ಬಾನು ಎಂದೂ ಬದಲಾಯಿಸಿದ್ದಾನೆ ಎಂದ ಅಪೂರ್ವ ಆಸ್ಪತ್ರೆಯ ಬೆಡ್ ಮೇಲೆ ಮಲಗಿದಲ್ಲೇ ಕಣ್ಣೀರಿಡುತ್ತಿದ್ದಾಳೆ.
ನಿತ್ಯ ನಮಾಜ್ ಮಾಡುವಂತೆ ನನಗೆ ಫೋರ್ಸ್ ಮಾಡ್ತಾ ಇದ್ದ. ನಾನ್ ವೆಜ್ ತಿನ್ನಲೇಬೇಕು ಅಂತ ಪೀಡಿಸುತ್ತಿದ್ದ. ಮಗು ಹುಟ್ಟಿದ ನಂತರ ಅವನಿಗೂ ನಾನ್ ವೆಜ್ ಬಾಯಲ್ಲಿ ಇಟ್ಟು ತಿನ್ನುವಂತೆ ಪೀಡಿಸುತ್ತಿದ್ದ. ನನ್ನನ್ನು ಇಜಾಜ್ ಹಿಪ್ನೊಟೈಜ್ ಮಾಡಿ ತನ್ನಂತೆ ಕೇಳುವಂತೆ ಮಾಡಿದ್ದ. ಅವರ ಮನೆಯಲ್ಲಿ ನಾನು ಇಜಾಜ್ ಮಾತನ್ನು ಮಾತ್ರ ಕೇಳುತ್ತಿದ್ದೆ. ನಿತ್ಯ ಕಿರುಕುಳ ಕೊಟ್ಟರೂ ಹೇಗೋ ಸಂಸಾರ ದೂಡುತ್ತಿದ್ದೆ. ಆದರೆ ಅವನಿಗೆ ಇನ್ನೊಂದು ಮದುವೆಯಾಗಿರೋದು, ಮೂವರು ಮಕ್ಕಳಿರುವುದು ನನಗೆ ತಡವಾಗಿ ಗಮನಕ್ಕೆ ಬಂತು ಎಂದು ಅಪೂರ್ವ ಅಳಲು ತೋಡಿಕೊಂಡಿದ್ದಾಳೆ.
ಇದೆಲ್ಲವನ್ನೂ ನೋಡಿದಾಗ ಪಾಪಿ ಇಜಾಜ್ ಲವ್ ಜಿಹಾದ್ ದುರುದ್ದೇಶ ಇಟ್ಟುಕೊಂಡಿದ್ದ ಅನಿಸುತ್ತದೆ. ಬೇರೆ ಹೆಣ್ಣುಗಳ ಜೊತೆ ಚೆಲ್ಲಾಟವಾಡುವ ಇಂತವವನಿಗೆ ಕಠಿಣ ಶಿಕ್ಷೆಯಾಗಬೇಕು ಆತನನ್ನು ಜೈಲಿನಿಂದ ಬಿಟ್ಟರೆ ನನಗೆ, ನನ್ನ ಮಗ ಮತ್ತು ತಾಯಿಗೆ ತೊಂದರೆ ಇದೆ. ಹೀಗಾಗಿ ಅವನನ್ನು ಜೈಲಿನಿಂದ ಹೊರಗೆ ಬಿಡದೆ, ಗಲ್ಲಿಗೇರಿಸಬೇಕು ಎಂದು ಸಂತ್ರಸ್ತೆ ಅಪೂರ್ವ ಪಬ್ಲಿಕ್ ನೆಕ್ಸ್ಟ್ ಮೂಲಕ ಒತ್ತಾಯಿಸಿದ್ದಾಳೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
14/03/2022 05:47 pm