ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪತ್ನಿಗೆ ಮಚ್ಚಿನಿಂದ ಕೊಚ್ಚಿ ಹಲ್ಲೆ!; ಯುವತಿ ಜೀವನ್ಮರಣ ಹೋರಾಟ

ಹುಬ್ಬಳ್ಳಿ: ಇವರಿಬ್ಬರು ಪ್ರೀತಿಸಿ ಮದುವೆಯಾದವರು. ಪ್ರೀತಿಗೆ ಧರ್ಮ- ಜಾತಿ ಇಲ್ಲವೆಂದು ಯುವತಿ ಅಪೂರ್ವ, ಇಜಾಜ್ ಶಿರೂರ ಎಂಬಾತನ ಜೊತೆ ಪ್ರೀತಿಸಿ ಮದುವೆ ಆಗಿದ್ದಳು. ಅಷ್ಟೇ ಅಲ್ಲ, ಮತಾಂತರವೂ ಆದಳು. ಒಂದು ಮಗು ಆಗುವವರೆಗೂ ಚೆನ್ನಾಗಿಯೇ ಇದ್ದರು. ಈಗ ಅಪೂರ್ವ, ಗಂಡನಿಂದ ಭೀಕರ ಹಲ್ಲೆಗೊಳಗಾಗಿ ಸಾವು- ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ.

ಹೌದು, ಇಜಾಜ್ ಗೆ ಮೊದಲೇ ಮದುವೆ ಆಗಿ ಎರಡು ಮಕ್ಕಳೂ ಇದ್ದರು ಎನ್ನಲಾಗಿದೆ. ಈ ವಿಷಯ ತಿಳಿದ ಅಪೂರ್ವ, ವಿಚ್ಚೇದನ ನೀಡಲು ಮುಂದಾಗಿದ್ದಾಳೆ. ಕೋಪಗೊಂಡ ದುರುಳ, 2 ದಿನಗಳ ಹಿಂದೆ ಅಪೂರ್ವ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದು, ಆಕೆ ಗಂಭೀರ ಸ್ಥಿತಿಯಲ್ಲಿದ್ದಾಳೆ.

ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ʼಕ್ರೂರಿ ಇಜಾಜ್ ಗೆ ಕಠಿಣ ಶಿಕ್ಷೆ ಆಗಬೇಕು. ಪೊಲೀಸರು ಏನಾದ್ರೂ ನಾಟಕ ಆಡಿದ್ರೆ, ಆತ ಹೊರಗಡೆ ಬಂದ ಮೇಲೆ ಕೊಚ್ಚಿ ಹಾಕ್ತೇವೆ ಎಂದೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹದಿಹರೆಯದ ಹೆಣ್ಣು ಮಕ್ಕಳು ಪ್ರೀತಿಯಲ್ಲಿ ಬೀಳೋ ಮುಂಚೆ ಅಪೂರ್ವಳ ಘಟನೆ ನೆನಪಿಸಿಕೊಳ್ಳಬೇಕು. ಇನ್ನಾದರೂ ಪೋಷಕರ ಮಾತನ್ನು ಕೇಳಬೇಕು. ಮನೆಯವರ ವಿರುದ್ಧವಾಗಿ ಹುಡುಗನ ನಂಬಿ ಹೋದರೆ ಇದೇ ಗತಿ ಎಂದು ಅಪೂರ್ವ ಪೋಷಕರು ದುಃಖ ತೋಡಿಕೊಂಡಿದ್ದಾರೆ.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

12/03/2022 11:03 pm

Cinque Terre

166.35 K

Cinque Terre

35

ಸಂಬಂಧಿತ ಸುದ್ದಿ