ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ರೈಲಿನಲ್ಲಿ ಚಾಕು ಇರಿದಿದ್ದ ಆರೋಪಿತರ ಬಂಧನ- ಕೃತ್ಯದಲ್ಲಿ ಅಪ್ರಾಪ್ತ ಭಾಗಿ

ಹುಬ್ಬಳ್ಳಿ: ಚಲಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಕರೊಬ್ಬರಿಗೆ ಚಾಕುವಿನಿಂದ ಇರಿದು ಹಣ, ಮೊಬೈಲ್ ಫೋನ್ ಸುಲಿಗೆ ಮಾಡಿದ್ದ ಆರೋಪಿ ಹಾಗೂ ಅಪ್ರಾಪ್ತ ಬಾಲಕನೊಬ್ಬನನ್ನು ಹುಬ್ಬಳ್ಳಿ ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹಳೇ ಹುಬ್ಬಳ್ಳಿ ನೂರಾನಿ ಗೌಂಡ್ ನಿವಾಸಿ ಮಹಮ್ಮದ ರಫೀಕ್ ಅಲಿಯಾಸ್ ಕಲಾ ಅಬುಲ್ ರಜಾಕ್ ಮುಲ್ಲಾ (25) ಬಂಧಿತ ಆರೋಪಿ. ಫೆಬ್ರವರಿ 23ರಂದು ರಾತ್ರಿ ಬೆಳಗಾವಿ-ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನಲ್ಲಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಧಾರವಾಡದ ಆರ್.ಜೆ.ಬೆಟಸೂರ ಅವರಿಗೆ ಚಾಕುವಿನಿಂದ ಇರಿದಿದ್ದರು. ಹಣ, ಮೊಬೈಲ್ ಕಿತ್ತುಕೊಂಡು ಯಲವಿಗಿ ನಿಲ್ದಾಣದಲ್ಲಿ ಇಳಿದು ಪರಾರಿಯಾಗಿದ್ದರು.

ಈಗಾಗಲೇ ಹುಬ್ಬಳ್ಳಿ, ದಾವಣಗೆರೆ ಸೇರಿದಂತೆ ಬಹುತೇಕ ಕಡೆಗಳಲ್ಲಿ ಪ್ರಕರಣ ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿತ್ತು. ಇನ್ನೋರ್ವ ಕುಖ್ಯಾತ ಸುಲಿಗೆಕೋರ ತಲೆಮರೆಸಿಕೊಂಡಿದ್ದು, ತನಿಖೆ ಮುಂದುವರೆದಿದೆ.

Edited By : Vijay Kumar
Kshetra Samachara

Kshetra Samachara

09/03/2022 11:32 am

Cinque Terre

24.97 K

Cinque Terre

6

ಸಂಬಂಧಿತ ಸುದ್ದಿ