ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ದೇವಸ್ಥಾನದ ಅಭಿವೃದ್ಧಿ ಹಣ ದುರ್ಬಳಕೆ ಆರೋಪ

ನವಲಗುಂದ: ಪಟ್ಟಣದ ಅಂಬೇಡ್ಕರ್ ನಗರದಲ್ಲಿರುವ ಶ್ರೀ ದುರ್ಗಾ ದೇವಸ್ಥಾನದ ಕಾಂಪೌಂಡ್ ಹಾಗೂ ಆವರಣದಲ್ಲಿ ಫೇವರ್ಸ್ ಹಾಕದೆ ಹಣ ದುರ್ಬಳಕೆ ಮಾಡಲಾಗಿದೆ ಎಂದು ಈಗ ಆರೋಪ ಕೇಳಿ ಬರುತ್ತಿದೆ.

ಪುರಾತನ ಹಾಗೂ ಊರಿನ ಪ್ರಮುಖ ದೇವಸ್ಥಾನವಾದ ಶ್ರೀ ದುರ್ಗಾ ದೇವಸ್ಥಾನಕ್ಕೆ 2019 ರಲ್ಲಿ ಸರ್ಕಾರದಿಂದ ಕರ್ನಾಟಕ ನೀರಾವರಿ ನಿಗಮ ಎಂ.ಆರ್.ಬಿ.ಸಿ ಉಪವಿಭಾಗ ನಂಬರ್ 16 ರ ಅಡಿಯಲ್ಲಿ ಕಾಂಪೌಂಡ್ ಗೋಡೆ ನಿರ್ಮಾಣ ಹಾಗೂ ದೇವಸ್ಥಾನದ ಫೇವರ್ಸ್, ಗೇಟ್ ಹಾಗೂ ಪೇಂಟ್ ಕೆಲಸಕ್ಕಾಗಿ ಒಟ್ಟು 10 ಲಕ್ಷ ರೂಪಾಯಿ ಮಂಜೂರಾಗಿದೆ.

ಆದರೆ 2020 ರಲ್ಲಿ ಕಾಂಪೌಂಡ್ ಗೋಡೆ ನಿರ್ಮಾಣ ಅಷ್ಟೇ ಆಗಿದೆ. ಇನ್ನು ಗೇಟ್, ಫೇವರ್ಸ್, ಬಣ್ಣದ ಕೆಲಸ ಹಾಗೆ ಬಾಕಿ ಇದ್ದು, ನೀರಾವರಿ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸೇರಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದ್ದು, ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ನೀಡಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ನಿಂಗಪ್ಪ ಕೆಳಗೇರಿ ಆರೋಪಿಸಿದರು.

Edited By : Shivu K
Kshetra Samachara

Kshetra Samachara

06/03/2022 08:20 pm

Cinque Terre

31.63 K

Cinque Terre

0

ಸಂಬಂಧಿತ ಸುದ್ದಿ