ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಡಿಸಿ ಮನೆ ಆವರಣದಲ್ಲಿದ್ದ ಗಂಧದ ಮರಕ್ಕೆ ಕನ್ನ ಹಾಕಿದ್ದವನ ಬಂಧನ

ಧಾರವಾಡ: ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರ ಸರ್ಕಾರಿ ಮನೆಯ ಆವರಣದಲ್ಲಿದ್ದ ಗಂಧದ ಮರಕ್ಕೆ ಕನ್ನ ಹಾಕಿದ್ದ ಖದೀಮನನ್ನು ಬಂಧಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ನವಲಗುಂದ ತಾಲೂಕಿನ ತಿರ್ಲಾಪುರ ಗ್ರಾಮದ ಮಾರುತಿ ಕಟ್ಟಿಮನಿ (31) ಎಂಬಾತನೇ ಬಂಧಿತ ವ್ಯಕ್ತಿ. ಇತ್ತೀಚೆಗಷ್ಟೇ ಜಿಲ್ಲಾಧಿಕಾರಿಗಳ ನಿವಾಸದಲ್ಲಿದ್ದ ಗಂಧದ ಮರವನ್ನು ಈತ ರಾತ್ರೋರಾತ್ರಿ ಕಟಾವು ಮಾಡಿಕೊಂಡು ಹೋಗಿದ್ದ. ನಿನ್ನೆ ಈತನನ್ನು ಗಂಧದ ಕಟ್ಟಿಗೆ ಸಮೇತ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

ಡಿಸಿ ಮನೆ ಆವರಣದಲ್ಲಿನ ಗಂಧದ ಮರ, ಗುಂಗರಗಟ್ಟಿ ಶ್ರೀಗಂಧದ ನೆಡು ತೋಪಿನಲ್ಲಿದ್ದ ಶ್ರೀಗಂಧದ ಮರ ಸೇರಿದಂತೆ ಒಟ್ಟು ಒಂದು ಲಕ್ಷ ರೂಪಾಯಿ ಮೌಲ್ಯದ ಗಂಧದ ಕಟ್ಟಿಗೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಸದ್ಯ ಈತನನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದ್ದು, ಇನ್ನುಳಿದ ಆರೋಪಿಗಳ ಶೋಧ ಕಾರ್ಯ ನಡೆದಿದೆ.

Edited By : Nagesh Gaonkar
Kshetra Samachara

Kshetra Samachara

04/03/2022 08:23 pm

Cinque Terre

37.03 K

Cinque Terre

3

ಸಂಬಂಧಿತ ಸುದ್ದಿ