ಹುಬ್ಬಳ್ಳಿ: ಹೊರ ಜಿಲ್ಲೆಗಳಿಂದ ಬಂದ ಅಪ್ರಾಪ್ತರಿಬ್ಬರಿಗೆ ಸಹಾಯ ಮಾಡುವ ನೆಪದಲ್ಲಿ ಪುಸಲಾಯಿಸಿದ ಯುವಕರಿಬ್ಬರು ಅತ್ಯಾಚಾರ ಎಸಗಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಯರಗುಪ್ಪಿ ಗ್ರಾಮದಲ್ಲಿ ನಡೆದ ಕುರಿಗಾಹಿ ಅತ್ಯಾಚಾರ ಯತ್ನ ಹಾಗೂ ಕೊಲೆಗೆ ಸಂಬಂಧಪಟ್ಟ ಸುದ್ದಿ ಮಾಸುವ ಮುನ್ನವೇ ಮತ್ತೊಂದು ಹೀನ ಕೃತ್ಯ ಧಾರವಾಡ ಜಿಲ್ಲೆಯಲ್ಲಿ ಸಂಭವಿಸಿದೆ.
ಹುಬ್ಬಳ್ಳಿಯ ಅಭಿಷೇಕ್ (27), ಪ್ರವೀಣ (25) ಅತ್ಯಾಚಾರ ಎಸಗಿದ ಯುವಕರು.
ಫೆ.28 ರಂದು ಸಂತ್ರಸ್ತೆಯರು ಹೊರ ಜಿಲ್ಲೆಯಿಂದ ನಾಪತ್ತೆಯಾಗಿ ಹುಬ್ಬಳ್ಳಿಯ ದೇಶಪಾಂಡೆ ನಗರದ ಹತ್ತಿರ ಸುತ್ತಾಡುತ್ತಿದ್ದಾಗ ಅಭಿಷೇಕ್ ಹಾಗೂ ಪ್ರವೀಣ ಅವರನ್ನು ಪರಿಚಯ ಮಾಡಿಕೊಳ್ಳುವುದರೊಂದಿಗೆ ಸಲಗೆ ಬೆಳೆಸಿಕೊಂಡು ಅಪ್ರಾಪ್ತ ಬಾಲಕಿಯರನ್ನು ಎರಡು ದಿನಗಳ ಕಾಲ ಗದಗ, ಹಾವೇರಿಯ ಪಾರ್ಕ್ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಸುತ್ತಾಡಿಸಿ ಬಳಿಕ ಈ ಹೀನ ಕೃತ್ಯ ಎಸಗಿದ್ದಾರೆ.
ಸದ್ಯ ಅತ್ಯಾಚಾರದ ಬಳಿಕ ಸಂತ್ರಸ್ತೆಯೊಬ್ಬರು ಕೀಚಕನ ಫೋನ್ ಬಳಸಿ ತನ್ನ ಕುಟುಂಬಸ್ಥರಿಗೆ ಈ ದುರ್ಘನೆಯ ಮಾಹಿತಿ ತಿಳಿಸಿ ಉಪನಗರ ಠಾಣೆಗೆ ಬಂದಿದ್ದಾರೆ. ಈ ವೇಳೆ ಅಭಿಷೇಕ್ ಹಾಗೂ ಪ್ರವೀಣ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ನಂತರ ಉಪನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಇನ್ಸ್ಪೆಕ್ಟರ್ ರವಿಚಂದ್ರನ್ ನೇತೃತ್ವದಲ್ಲಿ ಅಪ್ರಾಪ್ರೆ ಬಾಲಕಿಯನ್ನು ರಕ್ಷಿಸಿ, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
Kshetra Samachara
04/03/2022 09:39 am