ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪ್ರೀತಿಸಿ ಮದುವೆಯಾದ ಮಂಜುನಾಥ್ ಆತ್ಮಹತ್ಯೆಗೆ ಶರಣು

ಹುಬ್ಬಳ್ಳಿ: ಪ್ರೀತಿಸಿ ಮದುವೆಯಾಗಿ ಸುಖಸಂಸಾರದ ಕನಸು ಕಾಣುತ್ತಿದ್ದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ನವನಗರದ ಎಲ್ಐಜಿ ನಲ್ಲಿ ನಡೆದಿದೆ.

ಮಂಜುನಾಥ ಅಬ್ಬಿಗೇರಿ (30) ಮೃತ ದುರ್ದೈವಿ, ಈತ ಮೂಲತಃ ಧಾರವಾಡದ ಎತ್ತಿನಗುಡ್ಡದನಾಗಿದ್ದಾನೆ. 9 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿ ನವನಗರದ ಎಲ್‌ಐಜಿಯಲ್ಲಿ ಬಾಡಿಗೆ ಮನೆಯಲ್ಲಿ ತನ್ನ ಹೆಂಡತಿಯೊಂದಿಗೆ ವಾಸವಾಗಿದ್ದನು. ಈತನಿಗೆ ಎರಡು ಮಕ್ಕಳಿವೆ. ಆದರೆ ಮಂಜುನಾಥ ಅಬ್ಬಿಗೇರಿ ಮೂರು ದಿನಗಳ ಹಿಂದೆ ಮನೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾನಂತೆ. ಮಂಜುನಾಥ ಸಾವನ್ನಪ್ಪಿ ಮೂರು ದಿನಗಳು ಕಳೆದರೂ ಆತನ ಪತ್ನಿ ಮಾತ್ರ ಪತಿ ತೀರಿ ಹೋದ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ತಿಳಿಸಿರಲಿಲ್ಲವಂತೆ. ಇಂದು ಮೃತ ಮಂಜುನಾಥನ ಶವದ ವಾಸನೆ ಅಕ್ಕಪಕ್ಕದವರಿಗೆ ಬರುತ್ತಿದ್ದಂತೆ ಪಕ್ಕದ ಮನೆಯವರು ನವನಗರ ಎಪಿಎಂಸಿ ಠಾಣೆಯ ಪೋಲಿಸರಿಗೆ ವಿಷಯ ತಿಳಿಸಿದ್ದಾರೆ. ಆಗ ಸ್ಥಳಕ್ಕೆ ದೌಡಾಯಿಸಿದ ಪೋಲಿಸರು ಪರಿಶೀಲನೆ ನಡೆಸಿ ಮಂಜುನಾಥ ಅಬ್ಬಿಗೇರಿ ಶವವನ್ನು ಕಿಮ್ಸ್ ಶವಗಾರಕ್ಕೆ ಕಳುಹಿಸಿದ್ದಾರೆ.

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಜುನಾಥ ಅಬ್ಬಿಗೇರಿ ಕುಟುಂಬಸ್ಥರು ಮಂಜುನಾಥನ ಸಾವಿನ ಬಗ್ಗೆ ಸಂಶಯವಿದ್ದು, ಈ ಬಗ್ಗೆ ತನಿಖೆ ನಡೆಸಿ ಸತ್ಯಾಸತ್ಯತೆ ತಿಳಿಸಬೇಕೆಂದು ಆಗ್ರಹಿಸಿದ್ದಾರೆ. ಹಾಗಾಗಿ ಪೋಲಿಸರ ತನಿಖೆಯ ನಂತರ ಮಂಜುನಾಥ ಅಬ್ಬಿಗೇರಿ ಸಾವಿನ ಹಿಂದಿನ ರಹಸ್ಯ ಬಹಿರಂಗಗೊಳಬೇಕಾಗಿದೆ.

Edited By : Nagaraj Tulugeri
Kshetra Samachara

Kshetra Samachara

03/03/2022 07:40 am

Cinque Terre

25.92 K

Cinque Terre

1

ಸಂಬಂಧಿತ ಸುದ್ದಿ