ಹುಬ್ಬಳ್ಳಿ: ಪ್ರಿಯ ಪಾಲಕರೇ ಎಚ್ಚರ... ಎಚ್ಚರ... ನಿಮ್ಮ ಮಕ್ಕಳು ಶಾಲೆ ಹಾಗೂ ಕಾಲೇಜಿಗೆ ಹೋಗುತ್ತಿದ್ದರೆ ಎಚ್ಚರ. ನಿಮ್ಮ ಮಕ್ಕಳಿಗೆ ಖರ್ಚಿಗೆ ಹಣ ಕೊಟ್ಟು ಕಳಿಸುತ್ತಿದ್ದೀರಾ ಹಾಗಿದ್ದರೇ ಎಚ್ಚರ ವಹಿಸಲೇಬೇಕು. ಅರೇ. ಏನಿದು ಇಷ್ಟು ಎಚ್ಚರಿಕೆ ಕೊಡ್ತಿದ್ದಾರೆ ಎಂದುಕೊಂಡ್ರಾ.? ಹಾಗಿದ್ದರೆ ನೋಡಿ ಪಬ್ಲಿಕ್ ನೆಕ್ಸ್ಟ್ ಬಿಚ್ಚಿಡುತ್ತಿದೆ ಸ್ಫೋಟಕ ಮಾಹಿತಿ.
ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿಕೊಂಡು ಜೂಜಾಟಕ್ಕೆ ಬಲಿ ಹಾಕುವ ತಂಡಗಳು ಹುಬ್ಬಳ್ಳಿ, ಹಾವೇರಿ, ಗದಗ ಜಿಲ್ಲೆಯ ತಾಲೂಕು ಭಾಗದಲ್ಲಿ ಹೆಚ್ಚಾಗಿ ಬೇರು ಬಿಟ್ಟಿವೆ. ಅದು ಯಾವ ರೀತಿ ಟಾರ್ಗೆಟ್ ಮಾಡ್ತಾರೆ ಅಂದರೇ ಇಲ್ಲಿದೆ ನೋಡಿ ಕಾರ್ಯಾಚರಣೆ ವಿಡಿಯೋ..
ಕೆಲ ಏಜೆಂಟರ್‌ಗಳು ವಿದ್ಯಾರ್ಥಿಗಳಿಗೆ ಜೂಜಾಟದ (ಓಪನ್ ಕ್ಲೋಸ್) ಆಮಿಷವೊಡ್ಡಿ ಹೆಚ್ಚು ಹೆಚ್ಚು ಹಣ ಗಳಿಸುವ ಹುಚ್ಚು ಹಿಡಿಸುತ್ತಾರೆ. ಅಷ್ಟೇ ಅಲ್ಲದೆ ಜೂಜಾಟಕ್ಕೆ ವಿದ್ಯಾರ್ಥಿಗಳನ್ನು ತಂದು ಬಿಡುವ ದೊಡ್ಡ ಜಾಲವು ಸಕ್ರೀಯವಾಗಿ ಕೆಲಸ ಮಾಡುತ್ತಿದೆ. ಈ ಏಜೆಂಟರ್‌ಗಳು ತಮ್ಮ ನಂಬರ ಕೊಟ್ಟು ಎರಡು ನಂಬರ್‌ಗಳನ್ನು ಸೂಚಿಸಿ ಆಟ ಆಡಲು ಹಚ್ಚುತ್ತಾರೆ. ಮೊದಲು ಒಂದೆರಡು ಬಾರಿಗೆ ಹಣ ಪಡೆದ ವಿದ್ಯಾರ್ಥಿಗಳು ಜೂಜಿಗೆ ದಾಸರಾಗಿ ಓದುವ ಹಾಗೂ ಗುರಿಯ ಬಗ್ಗೆ ನಿರ್ಲಕ್ಷ್ಯ ತೋರುತ್ತಾರೆ. ಹೀಗಾಗಿ ಪಾಲಕರು ಇನ್ನಾದರೂ ಎಚ್ಚರ ವಹಿಸಿ ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿ ವಹಿಸಬೇಕಿದೆ.
ಇನ್ನೂ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್, ಹಾವೇರಿ ಹಾಗೂ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕಾರ್ಯಾಚರಣೆ ಮೂಲಕ ಈ ಜಾಲವನ್ನು ಭೇದಿಸಿ ವಿದ್ಯಾರ್ಥಿಗಳ ಭವಿಷ್ಯ ಕಾಪಾಡಬೇಕಿದೆ.
Kshetra Samachara
24/02/2022 05:40 pm