ಹುಬ್ಬಳ್ಳಿ: ಬ್ಯಾಂಕ್ ಅಧಿಕಾರಿ ಸೋಗಿನಲ್ಲಿ ನಕಲಿ ಕಸ್ಟಮರ್ ಕೇರ್ ವೇದಿಕೆ ಸೃಷ್ಟಿಸಿ ವ್ಯಕ್ತಿಯೊಬ್ಬರ ಖಾತೆಯಿಂದ 1.25 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿರುವ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೋಕುಲ್ ರಸ್ತೆ ಅರ್ಜುನ ವಿಹಾರದ ಜಯವಂತ ಸಾಬಣ್ಣವರ ತಮ್ಮ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬ್ಲಾಕ್ ಮಾಡುವ ಸಲುವಾಗಿ ಗೂಗಲ್‌ನಲ್ಲಿ ಕಸ್ಟಮರ್ ಕೇರ್ ನಂಬರ್ ಹುಡುಕಾಡಿದ್ದರು. ಅಲ್ಲಿ ಸಿಕ್ಕ ಒಂದು ನಂಬರ್‌ಗೆ ಕರೆ ಮಾಡಿದಾಗ ಅಪರಿಚಿತನೊಬ್ಬ ತಾನು ಬ್ಯಾಂಕ್ ಅಧಿಕಾರಿ ಎಂದು ನಂಬಿಸಿದ್ದ. ಬಳಿಕ ಜಯವಂತ ಅವರ ಮೊಬೈಲ್‌ನಲ್ಲಿ ಎನಿಡೆಸ್ಕ್ ಆ್ಯಪ್ ಡೌನ್‌ಲೋಡ್ ಮಾಡಿಸಿದ್ದ. ಡೆಬಿಟ್ ಕಾರ್ಡ್ ಮಾಹಿತಿ ಪಡೆದು ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
Kshetra Samachara
24/02/2022 12:42 pm