ಹುಬ್ಬಳ್ಳಿ: ಅಂಚೆ ಕಚೇರಿ ಸಿಬ್ಬಂದಿಯೆಂದು ಹೇಳಿಕೊಂಡ ವ್ಯಕ್ತಿಯೊಬ್ಬ ಗ್ರಾಹಕರೊಬ್ಬರಿಂದ ಸುಮಾರು 25 ಸಾವಿರ ರೂ. ಪಡೆದು ವಂಚಿಸಿದ ಘಟನೆ ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ನಡೆದಿದೆ.
ಪ್ರಕಾಶ ಜಾಮೇಲಪ್ಪ ಎಂಬಾತ ದೀಪಾ ಹಿರೇಮಠ ಎಂಬುವರ ಅಂಚೆ ಖಾತೆಯಲ್ಲಿ ಇರುವ ಹಣವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡುತ್ತೇನೆಂದು ನಂಬಿಸಿದ್ದಾರೆ. ನಂತರ ಜಮೆ ಮಾಡಲು ಒಂದು ಅರ್ಜಿಗೆ ಸಹಿ ಮಾಡಿಸಿಕೊಂಡು ಹಣವನ್ನು ಜಮೆ ಮಾಡದೇ ತನ್ನ ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
17/02/2022 08:54 am