ಧಾರವಾಡ: ಸಾಲ ವಾಪಸ್ ಕೊಡಿ ಎಂದು ಕೇಳಲು ಹೋದವಳ ಮೇಲೆ ಹಲ್ಲೆ ನಡೆಸಿರುವ ಘಟನೆ ಹಿರೇಮಲ್ಲಿಗವಾಡ ಗ್ರಾಮದಲ್ಲಿ ನಡೆದಿದೆ.
ಸುಶೀಲವ್ವ ಚೌರದ ಎಂಬ ಮಹಿಳೆ ಮೇಲೆ ಅದೇ ಗ್ರಾಮದ ಕೌಸಲ್ಯ ಪಾಟೀಲ ಎಂಬ ಮಹಿಳೆ ಹಲ್ಲೆ ಮಾಡಿದ್ದಾಳೆ ಎಂದು ಆರೋಪಿಸಿ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಕೌಸಲ್ಯ ಎಂಬ ಮಹಿಳೆ ಸುಶೀಲವ್ವಳ ಬಳಿ ಕರಾರು ಪತ್ರದೊಂದಿಗೆ 2 ಲಕ್ಷ ರೂ. ಸಾಲ ಪಡೆದುಕೊಂಡಿದ್ದಳು. ಈ ಸಾಲವನ್ನು ವಾಪಸ್ ಕೇಳಲು ಹೋದಾಗ ಕೌಸಲ್ಯ ತನ್ನ ಮೇಲೆ ಹಲ್ಲೆ ಮಾಡಿದ್ದಲ್ಲದೇ ಜಾತಿನಿಂದನೆ ಮಾಡಿದ್ದಾಳೆ ಎಂದು ಸುಶೀಲವ್ವ ಆರೋಪಿಸಿದ್ದಾಳೆ. ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.
Kshetra Samachara
13/02/2022 01:47 pm