ಧಾರವಾಡ: 3 ಲಕ್ಷ ರೂ. ಸಾಲ ಹಿಂತಿರುಗಿಸಲು ಚೆಕ್ ನೀಡಿ ವಂಚನೆ ಮಾಡಿದ ಘಟನೆ ಧಾರವಾಡದಲ್ಲಿ ನಡೆದಿದೆ. ಪ್ರತಿಷ್ಠಿತ ಕರ್ನಾಟಕ ಕಾಲೇಜಿನ ಪ್ರಾಂಶುಪಾಲರ ವಿರುದ್ಧ ಚೆಕ್ ಬೌನ್ಸ್ ಕೇಸ್ ಆಗಿದೆ.
ಹೌದು. ಧಾರವಾಡದ ಕರ್ನಾಟಕ ಕಾಲೇಜಿನ ಪ್ರಿನ್ಸಿಪಾಲ್ ದುರ್ಗಪ್ಪ ಕರಡೋಣಿ ಅವರನ್ನು ಚೆಕ್ ಕೇಸ್ ಬೌನ್ಸ್ ಕೇಸ್ ಪ್ರಕರಣದಲ್ಲಿ ಬಂಧಿಸಲು ಗೋಕಾಕ ಕೋರ್ಟ್ ಆದೇಶ ಹೊರಡಿಸಿದೆ. ದುರ್ಗಪ್ಪ ಕರಡೋಣಿ ಅವರು ತಮ್ಮ ಬ್ಯಾಂಕ್ ಖಾತೆಯಲ್ಲಿ ಹಣ ಇಲ್ಲದಿದ್ದರೂ ಚೆಕ್ ನೀಡಿ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕೆಸಿಡಿ ಕಾಲೇಜಿನ ಪ್ರಿನ್ಸಿಪಾಲ್ ದುರ್ಗಪ್ಪ ಅವರು 2020ರಲ್ಲಿ ಗೋಕಾಕ್ ಮೂಲದ ವಿಠ್ಠಲ್ ಮಾಳಗಿ ಎಂಬುವರಿಂದ 3 ಲಕ್ಷ ರೂ. ಕೈಗಡ ಸಾಲ ಪಡೆದುಕೊಂಡಿದ್ದರು. ಆದರೆ ಹಣ ವಾಪಸ್ ನೀಡದೆ ಸತಾಯಿಸುತ್ತಿದ್ದರು. ಸಾಲ ಕೊಟ್ಟವರು ಹಣ ಬೇಕೆಂದು ತಾಕೀತು ಮಾಡಿದಾಗ ಸಿಂಡಿಕೇಟ್ ಬ್ಯಾಂಕ್‌ನ ಚೆಕ್ ನೀಡಿದ್ದರು. ಆದರೆ ಚೆಕ್‌ನ ಪಡೆದ ವಿಠ್ಠಲ್ ಮಾಳಗಿ ಗೋಕಾಕದ ಬ್ಯಾಂಕ್ ಆಫ್ ಬರೋಡದಲ್ಲಿ ಚೆಕ್ ಹಾಕಿದಾಗ ಚೆಕ್ ಬೌನ್ಸ್ ಆಗಿದೆ. ಪ್ರಾಂಶುಪಾಲರ ಖಾತೆಯಲ್ಲಿ ಹಣ ಇಲ್ಲದಿದ್ದರೂ ಬೋಗಸ್ ಚೆಕ್ ನೀಡಿ ಮೋಸ ಮಾಡಲು ಹೊರಟಿದ್ದರು.
ಈ ಹಿನ್ನೆಲೆ ಸಾಲ ನೀಡಿದವರು ಸಿವಿಲ್ ಮತ್ತು ಕೆಎಂಎಫ್‌ಸಿ ಕೋರ್ಟ್‌ಗೆ ಮೊರೆ ಹೋಗಿ, ಪ್ರಿನ್ಸಿಪಾಲ್‌ರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ. ಪ್ರಿನ್ಸಿಪಾಲ್ ದುರ್ಗಪ್ಪ ಕರಡೋಣಿ ಅವರನ್ನು ಬಂಧಿಸುವಂತೆ ಹು-ಧಾ ಪೊಲೀಸ್ ಕಮಿಷನರ್‌ಗೆ ಗೋಕಾಕ ಕೋರ್ಟ್ ಆದೇಶ ನೀಡಿದೆ.
Kshetra Samachara
11/02/2022 04:43 pm