ಧಾರವಾಡ: ಆನ್‌ಲೈನ್ ಗೇಮ್‌ನಲ್ಲಿ ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಬರುತ್ತದೆ ಎಂದು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಜಾಹೀರಾತು ಕೊಟ್ಟು ಪುಸಲಾಯಿಸಿ , ಧಾರವಾಡ ಎಸ್‌ಡಿಎಂ ಮೆಡಿಕಲ್ ಕಾಲೇಜ್‌ನ ವೈದ್ಯಕೀಯ ವಿದ್ಯಾರ್ಥಿಗೆ ಅಪರಿಚಿತರು ಆನ್‌ಲೈನ್ ಮೂಲಕ 33,716 ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ಮೂಲತಃ ಮುರ್ಡೇಶ್ವರದ ವಾದಿರಾಜರು ಇನ್ಸ್ಟಾಗ್ರಾಮ್ ಖಾತೆ ನೋಡುತ್ತಿದ್ದಾಗ ವಂಚಕರು ಹಣ ಹೂಡಿಕೆಯ ಜಾಹೀರಾತು ನೀಡಿ ಆಸೆ ಹುಟ್ಟಿಸಿದ್ದಾರೆ. ನಂತರ ಆಕರ್ಷಕ ಪ್ಲಾನ್‌ಗಳನ್ನು ಕಳುಹಿಸಿ ಆನ್ಲೈನ್ ಮುಖಾಂತರ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ಮೋಸವೆಸಗಿದ್ದಾರೆ. ಈ ಕುರಿತು ಸೈಬರ್ ಆರ್ಥಿಕ ಮತ್ತು ಮಾದಕ ವಸ್ತುಗಳ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
03/02/2022 01:25 pm