ಪಬ್ಲಿಕ್ ನೆಕ್ಸ್ಟ್- ಈರಣ್ಣ ವಾಲಿಕಾರ
ಹುಬ್ಬಳ್ಳಿ: ಅದು ಖತರ್ನಾಕ್ ಕಳ್ಳರ ಗ್ಯಾಂಗ್. ಐಷಾರಾಮಿ ಕಾರು ಕಂಡ್ರೆ ಸಾಕು ಎಗರಿಸಬೇಕು ಅಂತ ಸ್ಕೆಚ್ ಹಾಕ್ತಾರೆ. ಕಣ್ಣು ಮುಚ್ಚಿ ತೆಗೆಯೊದ್ರೊಳಗೆ ಖೆಲ್ ಖತಮ್ ದುಖಾನ್ ಬಂದ್ ಮಾಡಿ ಕಾರ್ ಜೊತೆ ಎಸ್ಕೇಪ್ ಆಗ್ತಿದ್ದ ಗ್ಯಾಂಗ್ ಅಂದರ್ ಆಗಿದ್ದು ಹೇಗೆ ಗೊತ್ತಾ, ಈ ಸ್ಟೋರಿ ನೋಡಿ...
ಹೌದು. ಹುಬ್ಬಳ್ಳಿಯ ಪೊಲೀಸ್ ರು ಮತ್ತೊಮ್ಮೆ ಸದ್ದು ಮಾಡಿದ್ದಾರೆ. ಕೇಶ್ವಾಪುರ ಪೊಲೀಸರು ಖತರ್ನಾಕ್ ಕಾರ್ ಕಳ್ಳರನ್ನು ಬಂಧಿಸಿದ್ದಾರೆ. ಐಷಾರಾಮಿ ಕಾರುಗಳನ್ನು ಮಂಗ ಮಾಯ ಮಾಡುತ್ತಿದ್ದ 7 ಜನರ ಗ್ಯಾಂಗ್ ಸೆರೆ ಹಿಡಿದು ಶಭಾಷಗಿರಿ ಪಡೆದಿದ್ದಾರೆ. ಕೇಶ್ವಾಪುರದ ಇನ್ಸ್ಪೆಕ್ಟರ್ ಜಗದೀಶ್ ನೇತೃತ್ವ ದ ಪೊಲೀಸ್ ತಂಡ 7 ಜನ ಕುಖ್ಯಾತ ಕಾರ್ ವಂಚಕರನ್ನ ಬಂಧಿಸಿದ್ದಾರೆ. 12 ವಿವಿಧ ಕಂಪನಿಗಳ ಕಾರ್, 01 ಬೈಕ್ ಹಾಗೂ 227000 ರೂ.ನಗದು ಹಣ ಸೇರಿ ಒಟ್ಟು 50,27,000 ರೂ. ಮೌಲ್ಯದ ಸ್ವತ್ತು ರಿಕವರಿ ಮಾಡಿದ್ದಾರೆ.
ಬೈಟ್: ಲಾಭುರಾಮ್, ಪೊಲೀಸ್ ಆಯುಕ್ತ ಹುಬ್ಬಳ್ಳಿ-ಧಾರವಾಡ
ಈ ಬಗ್ಗೆ ಕೇಶ್ವಾಪುರ ಠಾಣೆ ವ್ಯಾಪ್ತಿಯಲ್ಲಿ ಒಂದು ಕಾರನ್ನು ಅಡವಿಟ್ಟು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಮೊದಲು ಪ್ರಕರಣ ದಾಖಲಾಗಿತ್ತು.
ಪ್ರಕರಣದ ಜಾಡನ್ನು ಬೆನ್ನಟ್ಟಿದ ಕೇಶ್ವಾಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್, ಜಗದೀಶ ಹಂಚನಾಳ ನೇತೃತ್ವದ ತಂಡ ಹುಬ್ಬಳ್ಳಿ ಕೇಶ್ವಾಪುರ ವ್ಯಾಪ್ತಿಯಲ್ಲಿ ನಾಲ್ಕು ಜನ ವಂಚಕರ ತಂಡವನ್ನು ಬಂಧಿಸಿ ಅವರ ಹೇಳಿಕೆಯ ಆಧಾರದ ಮೇಲೆ ಮಂಗಳೂರು ಮತ್ತು ಬೆಂಗಳೂರಿಗೆ ಹೋಗಿ ಪತ್ತೆ ಮಾಡಿ ಮತ್ತೆ ಮೂರು ಜನ ಆರೋಪಿತರನ್ನು ಬಂಧಿಸಿದ್ದು ಬಂಧಿತ ಆರೋಪಿತರಿಂದ ಈ ಕೆಳಗಿನಂತೆ ಕಾರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
12 ಪ್ರೀಮಿಯಂ ಕಾರುಗಳು. ಅದರಲ್ಲಿ ಇನ್ನೋವಾ,ಮಹೇಂದ್ರ ಎಕ್ಸ್ ಯುವಿ ಮತ್ತು ಬುಲ್ಲೆಟ್ ಬೈಕ್ ಕೂಡ ಸಿಜ್ ಮಾಡಿದ್ದಾರೆ. ಹೊಸ ಬಗೆಯ ಕಾರ್ ಕಳ್ಳರ ಕಹಾನಿ ಕೇಳಿ ಹುಬ್ಬಳ್ಳಿ ಮಂದಿ ಬೆಚ್ಚಿ ಬಿದ್ದಿದ್ದಾರೆ. ಕೇಶ್ವಾಪೂರ ಪೊಲೀಸ್ ತಂಡಕ್ಕೆ ಪೊಲೀಸ್ ಆಯುಕ್ತ ಲಾಬೂ ರಾಮ್ ಶ್ಲಾಘಿಸಿ ಅಭಿನಂದಿಸಿದ್ದಾರೆ.
ಈರಣ್ಣ ವಾಲಿಕಾರ
ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
Kshetra Samachara
02/02/2022 03:44 pm