ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜನ ಒಳಗಡೆ ಇದ್ದಾಗಲೇ ಮನೆಗಳಿಗೆ ಬೀಗ ಜಡಿದ ಖದೀಮರು

ಧಾರವಾಡ: ಜನರು‌ ಮನೆಯೊಳಗೆ ಇದ್ದಾಗಲೇ ಯಾರೋ ಕಿಡಿಗೇಡಿಗಳು ಹೊರಗಿನಿಂದ ಕೆಲ ಮನೆಗಳಿಗೆ ಬೀಗ ಹಾಕಿ ಪರಾರಿಯಾದ ಘಟನೆ ಧಾರವಾಡದ ಆಕಾಶವಾಣಿ ಸಿಬ್ಬಂದಿ‌‌ ಇರುವ ಕಾಲೊನಿಯಲ್ಲಿ ನಡೆದಿದೆ.

ಧಾರವಾಡ ಕೆಸಿಡಿ ಕಾಲೇಜ್ ಬಳಿ ಇರುವ ಆಕಾಶವಾಣಿ ಸಿಬ್ಬಂದಿ‌‌ಯ ಕಾಲೊನಿಯಲ್ಲಿ ‌ಮನೆ ಮಾಲೀಕರು ಒಳಗಡೆ ಮಲಗಿದ್ದಾಗ ಹೊರಗಡೆಯಿಂದ ಯಾರೋ ಬೀಗ ಹಾಕಿಕೊಂಡು ಹೋಗಿದ್ದಾರೆ. ಸುಮಾರು 8 ಮನೆಗಳಿಗೆ ಬೀಗ ಜಡಿದಿದ್ದು, ಕಳ್ಳತನ ಮಾಡಲು ಬಂದು ಹೀಗೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಹೊರಗಡೆಯಿಂದ ಬೀಗ ಹಾಕಿರುವುದನ್ನು ಕಂಡು ಕೆಲಕಾಲ ಮನೆ ಮಾಲೀಕರು ಆತಂಕಗೊಂಡಿದ್ದರು. ಬಳಿಕ ಹೊರಗಡೆ ಜನರಿಗೆ ಮಾಹಿತಿ ತಿಳಿಸಿದಾಗ ಅವರು ಬಂದು ಬೀಗ ತೆಗೆದಿದ್ದಾರೆ. ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Edited By : Nagesh Gaonkar
Kshetra Samachara

Kshetra Samachara

31/01/2022 04:56 pm

Cinque Terre

84.3 K

Cinque Terre

2

ಸಂಬಂಧಿತ ಸುದ್ದಿ