ಕುಂದಗೋಳ : ಬು.ತರ್ಲಘಟ್ಟ ಗ್ರಾಮ ಪಂಚಾಯಿತಿಯಲ್ಲಿ ನಡೆದ ಕೋಟಿ ಕೋಟಿ ಅವ್ಯವಹಾರ ಖಂಡಿಸಿ ಸತತ ಒಂದು ತಿಂಗಳು ಹೋರಾಟ ಮಾಡಿದ ಮಾಜಿ ಗ್ರಾ.ಪಂ ಸದಸ್ಯ ಇದೀಗ ವಿಷ ಕುಡಿದು ಆಸ್ಪತ್ರೆ ಪಾಲಾಗಿದ್ದಾರೆ.
ಅದು ಯಾಕೆ ಗೊತ್ತಾ? ಇದೇ ಸ್ವಾಮಿ ಕೋಟಿ ಕೋಟಿ ರೂಪಾಯಿ ಭ್ರಷ್ಟಾಚಾರದ ಕುರಿತು ಅಂದು ಹೋರಾಟ ಮಾಡಿದ ಸಿದ್ದಣ್ಣ ಕಳಸಣ್ಣನವರ ಹೋರಾಟಕ್ಕೆ ಜಯ ಸಿಕ್ಕು, ಅವ್ಯವಹಾರದದಲ್ಲಿ ಭಾಗಿಯಾದ ಅಧಿಕಾರಿಗಳು ಸಸ್ಪೆಂಡ್ ಆದ್ರೆ, ಮಾಜಿ ಗ್ರಾಪಂ ಅಧ್ಯಕ್ಷರಿಗೆ ನೋಟಿಸ್ ಬಂದಿದ್ದು, ಈ ವಿಚಾರವಾಗಿ ಅಧ್ಯಕ್ಷರ ಸಂಬಂಧಿ ನಾಗನಗೌಡ ಕೋಟಿಗೌಡರ ಮತ್ತು ಸಿದ್ದಣ್ಣ ಕಳಸಣ್ಣನವರ ಗುಂಪುಗಳ ನಡುವೆ ಪರಸ್ಪರ ಗಲಾಟೆ ಸಹ ನಡೆದಿವೆ.
ಈ ಗಲಾಟೆ ಬಗ್ಗೆ ಗುಡಗೇರಿ ಪೊಲೀಸ್ ಠಾಣೆಗೆ ಸಿದ್ದಣ್ಣ ಕಳಸಣ್ಣನವರ ನಾಲ್ಕು ಬಾರಿ ದೂರು ನೀಡಲೂ ಹೋದ್ರು, ಪಿಎಸ್ಐ ದೂರ ಸ್ವಿಕರಿಸದೇ ಧಮ್ಕಿ ಹಾಕಿ ಮರಳಿ ಸಿದ್ದಣ್ಣ ಕಳಸಣ್ಣನವರ ಮೇಲೆ ಅವರ ಕುಟುಂಬಸ್ಥರ ಮೇಲೆ ಎಎಫ್ಐಆರ್ ದಾಖಲು ಮಾಡಿದ್ದಾರೆ.
ಇದರಿಂದ ನೊಂದ ಸಿದ್ದಣ್ಣ ಕಳಸಣ್ಣನವರ ಕಾನೂನು ಮೊರೆ ಹೋದ್ರು ನ್ಯಾಯ ಸಿಕ್ಕಿಲ್ಲ ಎಂದು ಕುಟುಂಬ ಸಮೇತ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಒಟ್ಟಾರೆ ನ್ಯಾಯಕ್ಕಾಗಿ ಹೋರಾಡಿದವನು ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾದ್ರೇ, ಪತ್ನಿ ಕುಟುಂಬ ಉಳಿಸಿಕೊಳ್ಳಲು ಯಾರ ಬಳಿ ಅಂಗಲಾಚೋದು ? ತಿಳಿಯದಾಗಿದ್ದಾರೆ.
Kshetra Samachara
24/01/2022 05:42 pm