ಧಾರವಾಡ: ಮಲಪ್ರಭಾ ನೀರಿನ ಕೆನಾಲ್‌ಗೆ ಬಿದ್ದು ರೈತನೋರ್ವ ಸಾವನ್ನಪ್ಪಿರುವ ಘಟನೆ ನಿನ್ನೆ ನಡೆದಿದೆ.
ನವಲಗುಂದ ತಾಲೂಕಿನ ಬ್ಯಾಲ್ಯಾಳ ಗ್ರಾಮದ ಈರಯ್ಯ ಹಿರೇಮಠ (65) ಎಂಬುವವರೇ ಸಾವಿಗೀಡಾದವರು.
ಬ್ಯಾಲ್ಯಾಳ ಗ್ರಾಮದ ಬಳಿಯ ಕೆನಾಲ್‌ಗೆ ಬಿದ್ದಿದ್ದ ಈ ರೈತನ ಶವ ಬ್ಯಾಹಟ್ಟಿ ಗ್ರಾಮದ ಬಳಿಯ ಕೆನಾಲ್‌ನಲ್ಲಿ ಪತ್ತೆಯಾಗಿದೆ. ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ದೂರು ದಾಖಲಿಸಿಕೊಂಡಿದ್ದಾರೆ.
ಮನೆಯಲ್ಲಿನ ಕೆಲ ಸಮಸ್ಯೆಗಳಿಂದಾಗಿ ಈ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.
Kshetra Samachara
24/01/2022 12:14 pm