ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹಸೆಮಣೆ ಏರಬೇಕಿದ್ದ ಮದುಮಗ ಪೊಲೀಸರ ಅತಿಥಿ: ಶೋಕಿ ಮಾಡಲು ಹೋದವನ ರೋಚಕ ಕಹಾನಿ...!

ಹುಬ್ಬಳ್ಳಿ: ಆತ ತುಂಬಾ ಸಿಂಪಲ್ ಪರ್ಸನ್, ತಾನಾಯಿತು ತನ್ನ ಕೆಲಸ ಆಯ್ತು ಅಂತಿದ್ದ. ಆದರೆ ಆತನಿಗೆ ಅದೊಂದು ದುರಾಸೆ ಮೂಡಿತ್ತು.‌ ತನ್ನ ಮದುವೆಯನ್ನು ಅದ್ದೂರಿಯಾಗಿ ಮಾಡಿಕೊಳ್ಳಬೇಕೆಂದಿದ್ದ, ಅದಕ್ಕಾಗಿ ಬ್ಯಾಂಕ್ ದರೋಡೆಗಿಳಿದಿದ್ದ ಹೀಗಾಗಿ ಹಸೆಮಣೆ ಏರಬೇಕಾದವ ಸದ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.

ಹೌದು...ಮೊನ್ನೆ ಮಧ್ಯಾಹ್ನ ಹುಬ್ಬಳ್ಳಿಯ ಮಂದಿ ಬೆಚ್ಚಿಬಿದ್ದಿದ್ದರು. ಯಾಕೆಂದರೆ ಜನನಿಬೀಡ ಹಾಗೂ ಮಾರ್ಕೆಟ್‌ ಪ್ರದೇಶದಲ್ಲಿರುವ ಕೊಪ್ಪಿರಕರ್ ರಸ್ತೆಯ ಎಸ್ ಬಿ ಐ ಬ್ಯಾಂಕ್‌ ನಲ್ಲಿ ದರೋಡೆ ನಡೆದಿದ್ದು.‌ ಮಧ್ಯಾಹ್ನದ ವೇಳೆಯಲ್ಲಿಯೇ ಮಂಕಿ ಕ್ಯಾಪ್ ಧರಿಸಿ ಬ್ಯಾಂಕ್ ಗೆ ಎಂಟ್ರಿ ಕೊಟ್ಟಿದ್ದ, ಡೈರೆಕ್ಟ್ ಕ್ಯಾಶಿಯರ್ ಬಳಿ ನುಗ್ಗಿದವನೇ ತನ್ನ ಬಳಿಯಿದ್ದ ಚಾಕು ತೋರಿಸಿ ದರೋಡೆ ಮಾಡಿದ್ದ ಬರೋಬ್ಬರಿ 6.39 ಲಕ್ಷ ಹಣವನ್ನು ದೋಚಿ ಪರಾರಿಯಾಗ ತೊಡಗಿದ್ದ, ಅಷ್ಟರಲ್ಲೆ ಬ್ಯಾಂಕ್ ಸಿಬ್ಬಂದಿ ಕೂಗಾಟ ಶುರು ಮಾಡಿದ್ದರು. ಅದನ್ನು ನೋಡಿದ ಸ್ಥಳೀಯರು ಆತನ್ನನ್ನು ಹಿಡಿಯಲು ಬೆನ್ನಟ್ಟಿದ್ದರು. ಅಲ್ಲಿಯೇ ಗಸ್ತಿನಲ್ಲಿದ್ದ ಪೊಲೀಸರ ಕಿವಿಗೂ ವಿಷಯ ಬಿದ್ದಿತ್ತು. ತಕ್ಷಣ ಅಲರ್ಟ್ ಆದ ಪೊಲೀಸರಿಬ್ಬರು ಆತನನ್ನು ಬೆನ್ನಟ್ಟಿ ಹಿಡಿದಿದ್ದಾರೆ. ಸಿನಿಯಮ ರೀತಿಯಲ್ಲಿ ಬ್ಯಾಂಕ್ ದರೋಡೆ ಮಾಡಿ ಎಸ್ಕೇಪ್ ಆಗುತ್ತಿದ್ದವನನ್ನು ಹುಬ್ಬಳ್ಳಿ ಓರ್ವ ಟ್ರಾಫಿಕ್ ಕಾನ್ಸಟೇಬಲ್ ಮತ್ತು ಉಪನಗರ ಠಾಣೆಯ ಮಂಜುನಾಥ ಮಾಸ್ಟರ್ ಚೇಸ್ ಮಾಡಿ ಖದೀಮನನ್ನು ಹಿಡಿದು ಠಾಣೆಗೆ ತಂದಿದ್ದರು.

ಇನ್ನೂ ಬ್ಯಾಂಕ್ ದರೋಡೆ ಆಗಿದ್ದರಿಂದ ಕಂಗಾಗಲಾಗಿದ್ದ ಬ್ಯಾಂಕ್ ಮ್ಯಾನೇಜರ್ ಹಾಗೂ ಸಿಬ್ಬಂದಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಕೊನೆಗೂ ಠಾಣೆಗೆ ಬಂದ ಸಿಬ್ಬಂದಿ ತಮ್ಮ ಹಣ ಕಲೆಕ್ಟ್ ಮಾಡಿಕೊಂಡರೆ, ಇತ್ತ ಈ ಖದೀಮನನ್ನು ವಿಚಾರಣೆ ಮಾಡಿದ ಪೊಲೀಸರಿಗೆ ಇಂಟ್ರಸ್ಟಿಂಗ್ ವಿಚಾರ ಬಯಲಾಗಿತ್ತು. ತನ್ನ ಮದುವೆಯನ್ನು ಅದ್ದೂರಿಯಾಗಿ ಮಾಡಿಕೊಳ್ಳಲು ಈ ಭೂಪ ಬ್ಯಾಂಕ್ ದರೋಡೆಗೆ ಇಳಿದಿದ್ದ.‌ ಈ ವ್ಯಕ್ತಿ ಮೂಲತಃ ವಿಜಯಪುರದವನು. ಇತನ ಹೆಸರು ಪ್ರವೀಣ್ ಪಾಟೀಲ್ ಮೈಸೂರಿನ ಖಾಸಗಿ ಕಂಪನಿಯಲ್ಲಿ ಕೆಲಸಕ್ಕಿದ್ದ.‌ ಇನ್ನೇನು ಕೆಲ ದಿನಗಳಲ್ಲಿ ಮದುವೆ ಫಿಕ್ಸ್ ಕೂಡ ಆಗಿತ್ತು. ಅದೇ‌ ಮದುವೆಯನ್ನು ಅದ್ದೂರಿಯಾಗಿ ಮಾಡಿಕೊಳ್ಳಲು ಪ್ರವೀಣ್ ನಿರ್ಧರಿಸಿದ್ದ, ಹೀಗಾಗೇ ಅದಕ್ಕೆ ಬೇಕಾಗಿ ಹಣ ಹೊಂದಿಸೋಕೆ ಅನ್ಯ ಹಿಡಿದಿದ್ದ, ಹುಬ್ಬಳ್ಳಿಯಲ್ಲಿ ಕಳೆದ ಎರಡು ದಿನಗಳ ಹಿಂದೆ ಹುಬ್ಬಳ್ಳಿಯ‌ ಲಾಡ್ಜ್ ನಲ್ಲಿ ರೂಮ್ ಮಾಡಿಕೊಂಡಿದ್ದ ಆತ, ಬ್ಯಾಂಕ್ ರಾಬರಿ ಮಾಡಲ ಸ್ಕೆಚ್ ರೂಪಿಸಿದ್ದ, ಅದರಂತೆ ಹಣ ಲೂಟಿ ಮಾಡಿ ಏಸ್ಕೇಪ್ ಆಗುವಾಗ ಪೊಲೀಸರ ಮಾಸ್ಟರ್ ಚೇಸಿಂಗ್ ಮೂಲಕ ಬಲೆಗೆ ಬಿದಿದ್ದಾನೆ.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

20/01/2022 07:44 pm

Cinque Terre

95.45 K

Cinque Terre

3

ಸಂಬಂಧಿತ ಸುದ್ದಿ