ಹುಬ್ಬಳ್ಳಿ: ನಿಮ್ಮದು ಬುಲೆಟ್ ಬೈಕಾ..? ಅಥವಾ ಹೀರೋ ಹೊಂಡಾನಾ...ಅಲ್ಲ ಸ್ಕೂಟರ್ರಾ...? ಅದು ಯಾವುದೇ ಇರಲಿ ಇವರ ಕಣ್ಣೀಗೆ ಬಿದ್ದರೆ ಸಾಕು, ಕ್ಷಣ ಮಾತ್ರ ದಲ್ಲಿ ಮಂಗಮಾಯವಾಗುತ್ತದೆ. ಅಷ್ಟಕ್ಕೂ ಇವರಿಗೆ ಹಗಲು ಹೊತ್ತಾದರೂ ಓಕೆ ರಾತ್ರಿಯಾದರೂ ಓಕೆ...ಅರೆ ಏನ್ ಹೇಳುತ್ತಿದ್ದಾರೇ ಅಂದುಕೊಂಡ್ರಾ ಈ ಸ್ಟೋರಿ ನೋಡಿ.
ಹೌದು...ಹುಬ್ಬಳ್ಳಿ- ಧಾರವಾಡ ಅವಳಿನಗರ ಬೆಳೆದಂತೆ ಅಲ್ಲಿನ ಕ್ರೈಂ ಚಟುವಟಿಕೆ ಕೂಡಾ ಬೆಳೆಯುತ್ತೆವೆ. ಅದು ಯಾಕೋ ಏನೋ ಇತ್ತಿಚಿಗೆ ಇಲ್ಲಿ ಬೈಕ್ ಕಳ್ಳತನ ನಿಲ್ಲುತ್ತಾನೆ ಇಲ್ಲ. ವರ್ಷದಿಂದ ವರ್ಷಕ್ಕೆ ಇಲ್ಲಿ ಬೈಕ್ ಕಳ್ಳತನ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ. ರಾತ್ರಿ ಮನೆ ಮುಂದೆ ನಿಲ್ಲಿಸಿದ ಬೈಕ್ ಗಳಿಂದ ಹಿಡಿದು ಜನನಿಬೀಡ ಪ್ರದೇಶಗಳ ಪಾರ್ಕಿಂಗ್ ಸ್ಥಳಗಳಲ್ಲಿಯೂ ಕೈ ಚಳಕ ತೋರಿಸುತ್ತಿದ್ದಾರೆ. ಪಾರ್ಕಿಂಗ್ ಪ್ಲೇಸ್ ನಲ್ಲಿ ಪಾರ್ಕ್ ಮಾಡಿ ನಿಮ್ಮ ಕೆಲಸ ಮುಗಿಸಿಕೊಂಡು ಬರುವಷ್ಟರಲ್ಲಿ ನೋಡ ನೋಡುತ್ತಲೆ ನಿಮ್ಮ ಬೈಕ್ ಮರೆಯಾಗಿರುತ್ತದೆ. ಹಿಗಾಗೇ ಮನೆಯಿಂದ ಬೈಕ್ ಏರಿ ಮಾರ್ಕೆಟ್, ಆಸ್ಪತ್ರೆ, ದೇವಸ್ಥಾನಗಳಿಗೆ ಬರುವ ಜನ ಮರಳಿ ಬೈಕ್ ಮೇಲೆ ಹೊಗುತ್ತೀವಾ ಎನ್ನುವ ಪ್ರಶ್ನೆ ಕೇಳ್ತಿದ್ದಾರೆ.
ಇನ್ನೂ ಕಳೆದ ಮೂರು ವರ್ಷಗಳಲ್ಲಿ ಅವಳಿ ನಗರದಲ್ಲಿ ಬೈಕ್ ಕಳ್ಳತನ ಸಂಖ್ಯೆ ನೋಡೋದಾದ್ರೆ. 2018 ರಲ್ಲಿ ಒಟ್ಟು 177 ಕೇಸ್ ದಾಖಲಾಗಿದ್ದವು, ಮತ್ತು 2019 ರಲ್ಲಿ ಇದರ ಸಂಖ್ಯೆ ಜಾಸ್ತಿಯಾಗಿ 239 ಕ್ಕೇರಿತ್ತು. ಅಲ್ಲದೆ 2020 ರಲ್ಲಿ 226 ಬೈಕ್ ಕಳ್ಳತನವಾಗಿದೆ. ಇದರಲ್ಲಿ ಕೆಲವು ವಾಪಸ್ ಪೊಲೀಸರ ಕೈಗೆ ಸಿಕ್ಕರೇ,ಇನ್ನುಳಿದವು ಪತ್ತೆನೇ ಆಗಿಲ್ಲ. ಇನ್ನು ಕದ್ದ ಬೈಕ್ ಗಳನ್ನು ಈ ಖದೀಮರು ಗುಜರಿಗೆ ಹಾಕೋಕೆ ಶುರುಮಾಡಿದ್ದು. ದೊಡ್ಡ ಗ್ಯಾಂಗ್ ಈ ಕಳ್ಳತನದ ಹಿಂದೆ ಕೆಲಸ ಮಾಡ್ತಿದೆ ಎನ್ನೋ ಅನುಮಾನ ಮೂಡಿದೆ. ಅವಳಿ ನಗರ ಖಾಕಿ ಕೂಡಾ ಕಳೆದ ಕೆಲ ತಿಂಗಳ ಹಿಂದೆ ವಿದ್ಯಾನಗರ ಪೊಲೀಸರು, 25 ಬೈಕ್ ಗಳನ್ನು ಪತ್ತೆ ಹಚ್ಚಿದ್ದು ಬಿಟ್ಟರೆ ಮತ್ತೆ ದೊಡ್ಡ ಮಟ್ಟದ ಪತ್ತೆಯಾಗಿಲ್ಲ. ಆದರೂ ನಾವು ಇದೆಲ್ಲವನ್ನೂ ಕಂಟ್ರೋಲ್ ಗೆ ತರುತ್ತೇವೆ ಎನ್ನುತ್ತಿದ್ದಾರೆ.
Kshetra Samachara
16/01/2022 03:38 pm