ಹುಬ್ಬಳ್ಳಿ: 'ಇಲ್ಲೇ ಸುತ್ತಾಡಿಕೊಂಡು ಬರೋಣ ಬಾ' ಎಂದು ಅಪ್ರಾಪ್ತ ಯುವತಿಯನ್ನು ಕಲಘಟಗಿಯ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದ ಪ್ರಿಯಕರ, ಆಕೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ತಾಲೂಕಿನ ಗಿರಿಯಾಲ ಗ್ರಾಮದ ಶ್ರೀನಾಥ ನಾಗಣ್ಣವರ, 17 ವರ್ಷದ ಅಪ್ರಾಪ್ತಳನ್ನು ಪ್ರೀತಿಸುತ್ತಿದ್ದ. ಪುಸಲಾಯಿಸಿ ಜ. 10ರಂದು ಮಧ್ಯಾಹ್ನ ನೇಕಾರ ನಗರ ಸೇತುವೆ ಸಮೀಪ ಆಕೆಯನ್ನು ಕರೆಸಿಕೊಂಡು, ಅಲ್ಲಿಂದ ಕಲಘಟಗಿಗೆ ಕರೆದುಕೊಂಡು ಹೋಗಿದ್ದ.
ನಂತರ ಕಲಘಟಗಿ ಅರಣ್ಯ ಪ್ರದೇಶಕ್ಕೆ ಕರೆದೊಯ್ದು, ಆಕೆ ವಿರೋಧ ವ್ಯಕ್ತಪಡಿಸಿದರೂ ಒತ್ತಾಯಪೂರ್ವಕವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ಸಂತ್ರಸ್ತೆಯ ತಾಯಿ ಆರೋಪಿಸಿದ್ದಾರೆ. ಕಸಬಾಪೇಟ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
13/01/2022 08:37 am