ಹುಬ್ಬಳ್ಳಿ: ಆಸ್ತಿ ವಿಚಾರಕ್ಕೆ ಯುವಕನಿಗೆ ಚಾಕು ಹಾಕಿರುವ ಘಟನೆಯೊಂದು, ಹಳೇ ಹುಬ್ಬಳ್ಳಿ ಕೃಷ್ಣಪೂರದಲ್ಲಿ ತಡರಾತ್ರಿ ನಡೆದಿದೆ.
ನಿತಿನ್ ಅರುಣ ಚಂದಡಕರ್ ಚಾಕು ಇರಿತಕ್ಕೊಳಗಾದ ಯುವಕ. ಗಣೇಶ್ ವಿನೋದ ಚಂದಡಕರ್ ಎಂಬತಾನೇ ಚಾಕು ಇರಿದ ಯುವಕ, ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಚಾಕು ಹಾಕಿರುವುದಾಗಿ ನಿತಿನ್ ಕುಟುಂಬಸ್ಥರ ಆರೋಪ ಮಾಡುತ್ತಿದ್ದಾರೆ.
ಚಾಕು ಇರಿದ ಪರಿಣಾಮ ಯುವಕನಿಗೆ ಗಂಭೀರ ಗಾಯವಾಗಿದೆ. ಕುಟುಂಬಸ್ಥರು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಈ ಕುರಿತು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
08/01/2022 11:53 am