ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಕ್ಷಾಂತರ ರೂಪಾಯಿ ಮೌಲ್ಯದ ಕಬ್ಬಿಣ ಸಾಮಗ್ರಿ ಕಳ್ಳತನ

ಹುಬ್ಬಳ್ಳಿ: ಇಲ್ಲಿನ ಬಿಡ್ನಾಳ ಕ್ರಾಸ್ ಪಿಬಿ ರಸ್ತೆಯ ಪಕ್ಕದ ಖುಲ್ಲಾ ಜಾಗದಲ್ಲಿ ಇಟ್ಟಿದ್ದ ಮಹಮ್ಮದ ಷರೀಫ ಎಂಬುವರಿಗೆ ಸೇರಿದ 4,20,000 ರೂಪಾಯಿ ಮೌಲ್ಯದ ಕಬ್ಬಿಣದ ಸಾಮಗ್ರಿಗಳು ಕಳವಾಗಿರುವ ಕುರಿತು ಕಸಬಾಪೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿಸೆಂಬರ್ 20ರಿಂದ ಜನವರಿ 2ರ ನಡುವಿನ ಅವಧಿಯಲ್ಲಿ ಕಳವು ನಡೆದಿದ್ದು, ಖುಲ್ಲಾ ಜಾಗೆಯಲ್ಲಿ ಇಟ್ಟಿದ್ದ ಕಬ್ಬಿಣವನ್ನು ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಕಸಬಾಪೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Edited By :
Kshetra Samachara

Kshetra Samachara

08/01/2022 10:20 am

Cinque Terre

24.78 K

Cinque Terre

1

ಸಂಬಂಧಿತ ಸುದ್ದಿ