ಹುಬ್ಬಳ್ಳಿ: ಪ್ಲಿಪ್‌ಕಾರ್ಟ್ ಕಂಪನಿಯ ಪ್ರಾಜೆಕ್ಟ್‌ನಲ್ಲಿ ಹೂಡಿಕೆ ಮಾಡಿದರೆ ಭರ್ಜರಿ ಲಾಭ ಗಳಿಸಬಹುದು ಎಂಬ ಆಮಿಷ್ ಒಡ್ಡಿ ನಗರದ ಉದ್ಯಮಿಗೆ 32 ಲಕ್ಷ ವಂಚಿಸಲಾಗಿದೆ. ನಗರದ ಹೆಗ್ಗೇರಿ ಕಾಲೋನಿ ಉದ್ಯಮಿ ನಾಣ್ಯದ ಎಂಬುವರಿಗೆ ಅಪರಿಚಿತರು ವಂಚಿಸಿದ್ದಾರೆ.
ದೂರುದಾರರಿಗೆ ಅಪರಿಚಿತ ಮಹಿಳೆ ಲಕ್ಷ್ಮೀ ಮೆಹರ್ ಎಂಬ ಹೆಸರಿನಲ್ಲಿ ಪರಿಚಯಿಸಿಕೊಂಡಿದ್ದಾಳೆ. ಪ್ಲಿಪ್‌ಕಾರ್ಟ್ ಕಂಪನಿಯ ಪ್ರಾಜೆಕ್ಟ್‌ನಲ್ಲಿ ಹೂಡಿಕೆ ಮಾಡಿದರೆ ತುಂಬಾ ಲಾಭ ಗಳಿಸಬಹುದು ಎಂದು ನಂಬಿಸಿ, ವಿವಿಧ ಬ್ಯಾಂಕ್ ಖಾತೆಗಳಿಂದ ಹಂತ ಹಂತವಾಗಿ ಒಟ್ಟು 32 ಲಕ್ಷ ರೂಗಳನ್ನು ಆನ್‌ಲೈನ್ ಮೂಲಕ ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡು ಮೋಸ ಮಾಡಿದ್ದಾರೆ. ಪದೇ ಪದೇ ಹಣ ಹಾಕು ಎಂದು ಕೇಳುತ್ತಿದ್ದಾಗ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಹುಬ್ಬಳ್ಳಿ - ಧಾರವಾಡ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Kshetra Samachara
07/01/2022 12:25 pm