ಹುಬ್ಬಳ್ಳಿ: ಕಾಡು ಬೆಳಸಿ ನಾಡು ಉಳಿಸಿ ಎಂಬುವಂತ ಗಾದೆ ಮಾತು ಎಲ್ಲರಿಗೂ ಚಿರಪರಿಚಿತ. ಹೀಗೆ ಹೇಳುವ ಮೇಧಾವಿಗಳೇ ಪರಿಸರ ಸಂರಕ್ಷಣೆ ಬಗ್ಗೆ ನಿಷ್ಕಾಳಜಿ ತೋರುತ್ತಿದ್ದಾರೆ. ಅಲ್ಲದೇ ಹೊಸ ವರ್ಷದ ಆರಂಭಕ್ಕೆ ಹಳೆಯ ಹವ್ಯಾಸ, ಹಳೆಯ ಕಷ್ಟಗಳನ್ನು ಮರೆತು ಹೊಸ ಜೀವನ ನಡೆಸಲು ಜನರು ಚಿಂತಿಸುತ್ತಾರೆ. ಆದರೆ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮಾತ್ರ ವರ್ಷದ ಕೊನೆಯಲ್ಲಿಯೇ ಮರಗಳ ಮಾರಣಹೋಮ ನಡೆದಿದೆ.
ಹೌದು... ಹುಬ್ಬಳ್ಳಿಯ ಅಂದವನ್ನು ಹೆಚ್ಚಿಸಿರುವ ಕೇಶ್ವಾಪೂರ ರಸ್ತೆಯ ಬದಿಯಲ್ಲಿರುವ ಮರಗಳನ್ನು ಕಡಿದು ಹಾಕಲಾಗಿದೆ. ಇಷ್ಟು ವರ್ಷ ಸ್ವಚ್ಛಂದದ ವಾಯು ಹಾಗೂ ನೆರಳನ್ನು ನೀಡಿದ್ದ ಮರಗಳು ವರ್ಷದ ಕೊನೆಯ ದಿನದಲ್ಲಿಯೇ ಮಾರಣಹೋಮಕ್ಕೆ ತುತ್ತಾಗಿವೆ.
ಇನ್ನೂ ಘಟನೆ ಹುಬ್ಬಳ್ಳಿಯ ಕೇಶ್ವಾಪೂರದ ಪಾತಿಮ್ ಪದವಿಪೂರ್ವ ಮಹಾವಿದ್ಯಾಲಯದ ಬಳಿ ನಡೆದಿದ್ದು, ವರ್ಷದ ಕೊನೆಯಲ್ಲಿ ಕಷ್ಟಗಳನ್ನು ಕಳೆದು ಹೊಸ ಜೀವನಕ್ಕೆ ನಾಂದಿ ಹಾಡುವ ಈ ದಿನದಲ್ಲಿ ಮರಗಳ ಉದರಕ್ಕೆ ಕೊಡಲೆ ಪೆಟ್ಟು ಹಾಕಿರುವುದು ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಒಟ್ಟಿನಲ್ಲಿ ವರ್ಷವಿಡೀ ಏನು ಮಾಡಿದ್ದೇವೆ. ವರ್ಷದ ಕೊನೆಯಲ್ಲಿ ಏನು ಮಾಡಿದ್ದೇವೆ ಎಂಬುವುದಕ್ಕೆ ಸಾಕ್ಷಿ ಎಂಬಂತೆ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮರಗಳ ಮಾರಣಹೋಮ ನಡೆದಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
Kshetra Samachara
31/12/2021 06:12 pm