ಧಾರವಾಡ: ಧಾರವಾಡದ ಎಸ್‌ಡಿಎಂ ದಂತ ಕಾಲೇಜಿನ ಹತ್ತಿರ ಇರುವ ಉದಯಗಿರಿ ನೀರಿನ ಟ್ಯಾಂಕ್‌ನಲ್ಲಿ ವ್ಯಕ್ತಿಯೋರ್ವ ಬಿದ್ದು, ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾನೆ.
ಕರ್ನಾಟಕ ನೀರು ಸರಬರಾಜು ಮಂಡಳಿಗೆ ಸೇರಿದ ನೀರಿನ ಟ್ಯಾಂಕ್‌ನಲ್ಲಿ ಇಂದು ಬೆಳಿಗ್ಗೆ ಶವ ಪತ್ತೆಯಾಗಿದೆ. ವಾಟರ್‌ಮ್ಯಾನ್ ಒಬ್ಬರು ನೀರಿನ ಟ್ಯಾಂಕ್ ಪರಿಶೀಲನೆ ಮಾಡುವ ವೇಳೆ ಶವ ಪತ್ತೆಯಾಗಿದೆ.
ಟ್ಯಾಂಕಿನ ಮೇಲೆ ವಸ್ತ್ರ ಇಟ್ಟಿರುವ ಈ ವ್ಯಕ್ತಿ ತಾನಾಗೇ ಆತ್ಮಹತ್ಯೆ ಮಾಡಿಕೊಂಡಿದ್ದಾನೋ ಅಥವಾ ಕೊಲೆಯೋ ಎಂಬುದರ ಬಗ್ಗೆ ಪೊಲೀಸ್ ತನಿಖೆಯಿಂದ ಗೊತ್ತಾಗಬೇಕಿದೆ. ಸ್ಥಳಕ್ಕೆ ವಿದ್ಯಾಗಿರಿ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ. ಟ್ಯಾಂಕಿನ ಮೂಲೆಯಲ್ಲಿ ಶವ ಕಾಣಿಸಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Kshetra Samachara
28/12/2021 01:38 pm