ನವಲಗುಂದ : ಇದೇ ತಿಂಗಳ ೧೬ ರಂದು ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಹೊಲದ ಆರ್‌ಟಿಎಸ್ ಪ್ರಕರಣದ ವಿಚಾರಣೆ ನಡೆಸುವ ವೇಳೆ ನವಲಗುಂದ ತಹಶೀಲ್ದಾರ್ ನವೀನ ಹುಲ್ಲೂರ ಸೇರಿದಂತೆ ಅನೇಕರು ಹಲ್ಲೆ ನಡೆಸಿದ್ದಾರೆ ಎಂದು ನವಲಗುಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ .
ಶಿದ್ಲಿಂಗಪ್ಪ ಹಂಪಿಹೊಳಿ, ಮಲ್ಲಿಕಾರ್ಜುನ ಹಂಪಿಹೊಳಿ ಎಂಬುವವರ ಮೇಲೆ ಹಲ್ಲೆಯಾಗಿದೆ ಎಂದು ದೂರಲಾಗಿದೆ. ಇನ್ನು ದೂರಿನಲ್ಲಿ ಹೊಲದ ಆರ್‌ಟಿಎಸ್ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ನವಲಗುಂದ ತಹಶೀಲ್ದಾರ್ ಕಚೇರಿಯಲ್ಲಿ ಡಿಸೆಂಬರ್ 16 ರಂದು ಮುದ್ದತ್ ಗಾಗಿ ಕರೆಯಲಾಗಿತ್ತು. ಈ ಕುರಿತು ಸಿವಿಲ್ ಕೋರ್ಟ್‌ಗೆ ಹಾಜರಾಗಿದ್ದ ಕಾರಣ, ತಹಶೀಲ್ದಾರ್ ಕಚೇರಿಗೆ ಸಹೋದರ ಮಲ್ಲಿಕಾರ್ಜುನ ಹಂಪಿಹೊಳಿಯನ್ನು ಮುದ್ದತ್‌ಗೆ ಕಳುಹಿಸಿದ್ದೆ. ಆದರೆ, ಈ ವೇಳೆ ಸಹೋದರ ಮಲ್ಲಿಕಾರ್ಜುನ ಮೇಲೆ ಹಲ್ಲೆ ನಡೆಸಲಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಹೋದಾಗ ತಹಶೀಲ್ದಾರ್ ಹಾಗೂ ಸೋಮವ್ವ ಬಸವರಾಜ ಹಂಪಿಹೊಳಿ, ಗೂಳಪ್ಪ ಹಂಪಿಹೊಳಿ, ಪೇಮವ್ವ, ನಾಗಪ್ಪ ಹಂಪಿಹೊಳಿ, ಈರಪ್ಪ ಹೊಂಬಳ ಅವರು ಸೇರಿದಂತೆ ಹಲವರು ಹಲ್ಲೆ ನಡೆಸಿ, ಜೀವ ಬೆದರಿಕೆಯನ್ನೂ ಹಾಕಿದ್ದಾರೆ ಎಂದು ಶಿದ್ಲಿಂಗಪ್ಪ ಹಂಪಿಹೊಳಿ ಉಲ್ಲೇಖಿಸಿದ್ದಾರೆ.
Kshetra Samachara
22/12/2021 09:32 pm