ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೊಲೀಸ್ ವಾಹನದ ಮೇಲೆ ಬರ್ತಾರೆ ಚಿನ್ನದ ಸರ ಕಿತ್ತುಕೊಂಡು ಹೋಗ್ತಾರೆ ಹುಷಾರ್‌

ಧಾರವಾಡ: ಪೊಲೀಸ್ ಎಂದು ಬರೆಯಲಾದ ಬೈಕ್ ತೆಗೆದುಕೊಂಡು ಬಂದ ಖದೀಮರು ಧಾರವಾಡದ ಎರಡು ಕಡೆಗಳಲ್ಲಿ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಇಂದು ಬೆಳ್ಳಂಬೆಳಿಗ್ಗೆ ಧಾರವಾಡದ ಹೊಸಯಲ್ಲಾಪುರ ಹಾಗೂ ಶ್ರೀನಗರದಲ್ಲಿ ಚೈನ್ ಸ್ನ್ಯಾಚಿಂಗ್ ನಡೆದಿದೆ. ಹೊಸಯಲ್ಲಾಪುರದ ವೇದಾ ಬಿಜಾಪೂರ ಎಂಬುವವರು ವಾಯು ವಿಹಾರಕ್ಕೆಂದು ಹೋಗಿದ್ದ ವೇಳೆ ಅವರ ಕೊರಳಲ್ಲಿದ್ದ 350 ಗ್ರಾಂ ತೂಕದ ಚಿನ್ನದ ಸರ ಹಾಗೂ ಶ್ರೀನಗರದಲ್ಲಿ ವಾಯು ವಿಹಾರಕ್ಕೆಂದು ತೆರಳಿದ್ದ ಮಹಿಳೆಯೊಬ್ಬರ ಕೊರಳಲ್ಲಿದ್ದ 450 ಗ್ರಾಂ ತೂಕದ ಚಿನ್ನದ ಸರವನ್ನು ಬೈಕ್ ಮೇಲೆ ಬಂದ ಖದೀಮರು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಇವರು ತಂದಿದ್ದ ಬೈಕ್ ಹಿಂದೆ ಪೊಲೀಸ್ ಎಂದು ಬರೆಯಲಾಗಿತ್ತು. ವಿಚಿತ್ರ ಎಂದರೆ ನಗರದಲ್ಲಿ ಕಳ್ಳತನವಾದ ಬೈಕ್‌ಗಳನ್ನೇ ಈ ಖದೀಮರು ಸರಗಳ್ಳತನಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ಒಂದು ಕಡೆ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಕಳ್ಳರ ಪತ್ತೆಗೆ ಜಾಲ ಬೀಸಿದ್ದಾರೆ. ಈ ಸಂಬಂಧ ಉಪನಗರ ಠಾಣೆಯಲ್ಲಿ ಎರಡು ಪ್ರತ್ಯೇಕ ದೂರುಗಳು ದಾಖಲಾಗಿವೆ.

Edited By :
Kshetra Samachara

Kshetra Samachara

21/12/2021 10:45 am

Cinque Terre

37.57 K

Cinque Terre

9

ಸಂಬಂಧಿತ ಸುದ್ದಿ