ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಹೆಂಡತಿಯ ಚಪಲಕ್ಕೆ ರಾತ್ರೋರಾತ್ರಿ ಹರಿದಿತ್ತು ಗಂಡನ ನೆತ್ತರು

ಧಾರವಾಡ: ಅದು ಗಂಡ, ಹೆಂಡತಿ, ಇಬ್ಬರು ಮಕ್ಕಳ ಸುಂದರ ಸಂಸಾರ. ಎಲ್ಲವೂ ಚೆನ್ನಾಗಿದ್ರೂ ಆ ಮನೆಯ ಒಡತಿಗೆ ಅದೇನೋ ಬೇರೆಯದ್ದೇ ಚಪಲ. ಆ ಚಪಲದ ಆಸೆಗೆ ಆಕೆ ತನ್ನ ಪತಿಯನ್ನೇ ಛಟ್ಟಕ್ಕೇರಿಸಿದ್ದಾಳೆ. ..

ಈ ರೀತಿ ಕಟ್ಟುಮಸ್ತಾದ ದೇಹ ಹೊಂದಿರುವ ಈ ವ್ಯಕ್ತಿಯ ಹೆಸರು ಭೀಮಪ್ಪ ಕರಿಸಿದ್ದಣ್ಣವರ ವಯಸ್ಸು ಈಗಷ್ಟೆ 33 ವರ್ಷ. ಆದರೆ, ಈಕೆಯ ಪತ್ನಿ ಕಾವೇರಿಗೆ ಬೇರೊಂದು ಯುವಕನ ಜೊತೆ ನಂಟು. ಈ ನಂಟು ಇದೀಗ ಪತಿ ಭೀಮಪ್ಪನನ್ನ ಬಾರದ ಲೋಕಕ್ಕೆ ದೂಡಿದೆ. ಈ ಘಟನೆ ನಡೆದದ್ದು ಧಾರವಾಡ ತಾಲೂಕಿನ ಮುಳಮುತ್ತಲ ಗ್ರಾಮದಲ್ಲಿ.

ಭೀಮಪ್ಪ ಎಂದಿನಂತೆ ತರಕಾರಿ ಮಾರಾಟ ಮುಗಿಸಿಕೊಂಡು ಮನೆಗೆ ಬಂದು ಮಲಗಿದ್ದ. ಈತನ ಪತ್ನಿ ಕಾವೇರಿಗೆ ಅದೇನು ಚಪಲವೋ ಗೊತ್ತಿಲ್ಲ. ತಮ್ಮ ಮನೆಯ ಪಕ್ಕದಲ್ಲೇ ಇದ್ದ ಶಿವು ನಿಂಬೋಜಿ ಎಂಬಾತನ ಜೊತೆಗೆ ಕಳೆದ ಎರಡು ವರ್ಷಗಳಿಂದ ಅನೈತಿಕ ಸಂಬಂಧ ಇಟ್ಟುಕೊಂಡಿದ್ಲಂತೆ. ಇವರ ಈ ಸಂಬಂಧಕ್ಕೆ ಗಂಡ ಅಡ್ಡಿಯಾಗುತ್ತಿದ್ದ. ಹೀಗಾಗಿ ರಾತ್ರಿ ಮಲಗಿದ್ದ ವೇಳೆ ಕಾವೇರಿ ಹಾಗೂ ಆಕೆಯ ಪ್ರಿಯತಮ ಶಿವು, ಭೀಮಪ್ಪನಿಗೆ ಕೊಡಲಿ ಏಟು ಕೊಟ್ಟು ಮತ್ತೆ ಮೇಲೇಳದಂತೆ ಮಾಡಿದ್ದಾರೆ.

ಈ ಕೊಲೆಗೆ ಕಾವೇರಿಯ ಅನೈತಿಕ ಸಂಬಂಧವೇ ಕಾರಣ ಅನ್ನೋದು ಸ್ಥಳೀಯರು ಮತ್ತು ಭೀಮಪ್ಪನ ಗೆಳೆಯರ ಆರೋಪವಾಗಿದೆ. ಆದರೆ, ಈ ಕೊಲೆ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕಿದೆ ಅಂತಾ ಪೊಲೀಸರು ಹೇಳುತ್ತಿದ್ದಾರೆ.

Edited By : Shivu K
Kshetra Samachara

Kshetra Samachara

16/12/2021 09:45 pm

Cinque Terre

51.12 K

Cinque Terre

5

ಸಂಬಂಧಿತ ಸುದ್ದಿ