ಹುಬ್ಬಳ್ಳಿ: ಸಂತೆಗಳಲ್ಲಿ ಮೊಬೈಲ್ ಕಳ್ಳತನ ಮಾಡುತಿದ್ದ ತಂಡದ ಮೂವರನ್ನು ನಗರದ ಗೋಕುಲ ಪೊಲೀಸ್ ಠಾಣೆಯ ಪೊಲೀಸರು
ಬಂಧಿಸಿದ್ದಾರೆ.
ಹುಬ್ಬಳ್ಳಿ ಗೋಕುಲ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಜೆ.ಎಂ.ಕಾಲಿಮಿರ್ಚಿ ನೇತೃತ್ವದಲ್ಲಿ ಕಾರ್ಯಾಚರಣೆಯಲ್ಲಿ, ಸುಮಾರು 6 ಲಕ್ಷ ಮೌಲ್ಯದ 25 ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ. ಹುಬ್ಬಳ್ಳಿ, ಧಾರವಾಡ, ಕಾರವಾರ, ವಿಜಯಪುರ, ಗದಗ, ಪುಣೆ ಮುಂತಾದ ಕಡೆಗಳಲ್ಲಿ ಕಳ್ಳತನದಲ್ಲಿ ಕೈ ಚಳಕ ತೋರಿದ್ದ ಕಳ್ಳರನ್ನು ಬಂಧನ ಮಾಡಿದ್ದಾರೆ ಹಣಮಂತ, ಕುಮಾರ ಭದ್ರಾವತಿ, ಸೋಮಶೇಖರ್ ಕುಂದಗೋಳ ಬಂಧಿತರಾಗಿದ್ದು, ಹೇಮಾವತಿ ಎಂಬುವವರು ಪರಾರಿಯಾಗಿದ್ದು ಬಂಧನಕ್ಕೆ ಬಲೆ ಬೀಸಿದ್ದಾರೆ.
Kshetra Samachara
14/12/2021 09:40 am