ಹುಬ್ಬಳ್ಳಿ: ಅವರೆಲ್ಲರೂ ಅಗ್ರಿಗೋಲ್ಡ್ ಕಂಪನಿಯ ಹೆಸರಲ್ಲಿ ಜನರಿಂದ ದುಡ್ಡು ಪಡೆದು ಕಂಪನಿಗೆ ಕಟ್ಟಿರುವ ಏಜೆಂಟರ್. ಈಗ ಕಂಪನಿ ಸಂಪೂರ್ಣವಾಗಿ ಮುಚ್ಚಿ ಹೋಗಿದೆ. ಆದರೆ ಇವರು ಮಾಡಿರುವ ವ್ಯವಹಾರದ ಲೆಕ್ಕಪತ್ರಗಳು ಮಾತ್ರ ಇನ್ನೂ ಜೀವಂತವಾಗಿವೆ. ಈಗ ಕಟ್ಟಿಸಿರುವ ದುಡ್ಡು ಕೊಡಲು ಆಗದೇ ಜೀವ ಕಳೆದುಕೊಳ್ಳಲು ಮುಂದಾಗಿದ್ದಾರೆ.
ಆಂದ್ರಪ್ರದೇಶ ಮೂಲದ ಅಗ್ರಿಗೋಲ್ಡ್ ಖಾಸಗಿ ಕಂಪನಿಯು ಲಕ್ಷಾಂತರ ಜನರಿಗೆ ಉದ್ಯೋಗ ಕಲ್ಪಿಸುವುದಾಗಿ ಹೇಳಿತ್ತು. ಜನರಿಂದ ಹಣ ಪಡೆದು ಏಕಾಏಕಿ ಮುಚ್ಚಿಹೋಗಿದೆ. ಈಗ ದುಡ್ಡು ಕಟ್ಟಿದವರು ಏಜೆಂಟ್ ಮನೆಗೆ ಅಲೆದಾಡುತ್ತಿದ್ದು, ಏಜೆಂಟರ್ ಗಳು ಸಮಸ್ಯೆಗೆ ಸಿಲುಕಿದ್ದು, ಜೀವ ಕಳೆದುಕೊಳ್ಳಲು ಮುಂದಾಗುತ್ತಿದ್ದಾರೆ. ಎಂಟು ರಾಜ್ಯದಲ್ಲಿ 32 ಲಕ್ಷ ಖಾತೆಯ 6,385 ಕೋಟಿ ಹಣವನ್ನು ಪಾವತಿಸದೇ ದೀಡಿರನೇ ಬಂದ್ ಮಾಡಿದೆ. ಈ ಕುರಿತು ಸಿಐಡಿ ತನಿಖೆ ಕೂಡ ಮಾಡಿದೆ. ಇದರಲ್ಲಿ ಕೆಲವು ಚರಾಸ್ಥಿಗಳನ್ನು ಜಪ್ತಿ ಮಾಡಲಾಗಿದೆ. ಈಗ ಸರ್ಕಾರ ರಾಜ್ಯದಲ್ಲಿರುವ ಆಸ್ತಿಯನ್ನು ಮಾರಾಟ ಮಾಡಿ ಗ್ರಾಹಕರಿಗೆ ಹಣವನ್ನು ಮರಳಿಸಬೇಕು ಎಂದು ಮನವಿ ಮಾಡಿದ್ದಾರೆ.
ದುಡಿದು ಭವಿಷ್ಯದಲ್ಲಿ ಏನಾದರೂ ಉಪಯೋಗ ಆಗುತ್ತದೇ ಎಂದು ಹಣವನ್ನು ಪಾವತಿಸಿದ ಗ್ರಾಹಕರಿಗೆ ಶಾಕ್ ಆಗಿದೆ. ಮನೆಯಲ್ಲಿ ಮಕ್ಕಳ ಮದುವೆ ಇದ್ದರೂ ನಯಾಪೈಸೆ ಹಣ ಕೈ ಸೇರಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸೂಕ್ತ ಕ್ರಮಗಳನ್ನು ಜರುಗಿಸಿ ನಮ್ಮ ಹಣವನ್ನು ನಮಗೆ ಮರಳಿಸಿ ನಮ್ಮ ಜೀವ ಕಾಪಾಡಬೇಕು ಎಂದು ಮಾಧ್ಯಮದ ಮುಂದೆ ಕಣ್ಣೀರು ಹಾಕಿದ್ದಾರೆ.
Kshetra Samachara
11/12/2021 04:35 pm