ಹುಬ್ಬಳ್ಳಿ: ಇಲ್ಲಿನ ಕೇಶ್ವಾಪುರ- ಕುಸುಗಲ್ಲ ರಸ್ತೆಯ ವೈಭವ ನಗರದ ಬಳಿ ಬೈಕ್ ಅಪಘಾತ ಪಡಿಸಿ ಸವಾರನಿಂದ 28,000 ರೂ. ಮೌಲ್ಯದ 8 ಗ್ರಾಂ ಚಿನ್ನದ ಸರ ಹಾಗೂ ಬೈಕ್ ಕಿತ್ತುಕೊಂಡು ಪರಾರಿಯಾದ ಘಟನೆ ನಡೆದಿದೆ.
ವ್ಯಕ್ತಿಯೋರ್ವ ರಾತ್ರಿ 8 ಗಂಟೆಗೆ ಕೇಶ್ವಾಪುರ ಕಡೆಯಿಂದ ಕುಸುಗಲ್ ಕಡೆಗೆ ಹೊರಟಿದ್ದರು. ಈ ವೇಳೆ ಎದುರಿನಿಂದ ಬಂದ ಬೈಕ್ ಸವಾರರು ಡಿಕ್ಕಿ ಹೊಡೆದಿದ್ದಾರೆ. ಬಳಿಕ ಕೊರಳಲ್ಲಿದ್ದ ಚೈನ್, ಬೈಕ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.
Kshetra Samachara
10/12/2021 08:45 am