ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಬರೆಯುತ್ತಿದ್ದ ವ್ಯಕ್ತಿ ಅಂದರ್

ಕುಂದಗೋಳ : ತನ್ನ ಸ್ವಂತ ಲಾಭಕೊಸ್ಕರವಾಗಿ ಸಾರ್ವಜನಿಕ ಪ್ರದೇಶದಲ್ಲಿ ಮಟ್ಕಾ ಸಂಖ್ಯೆ ಬರೆಯುತ್ತಿದ್ದ ವ್ಯಕ್ತಿಯೋರ್ವನನ್ನು ಖಚಿತ ಮಾಹಿತಿ ಮೇರೆಗೆ ಕುಂದಗೋಳ ಗ್ರಾಮೀಣ ಪೊಲೀಸರು ಬುಧವಾರ ಸಾಯಂಕಾಲ ಬಂಧಿಸಿದ್ದಾರೆ.

ಕಮಡೊಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿ ಹುಬ್ಬಳ್ಳಿ ನೇಕಾರನಗರದ ನಾಗಾರಾಜ ಕ್ಷೀರಸಾಗರ ಆತನ ಸ್ನೇಹಿತ

ಪರಶುರಾಮ ಹಣಬೆ ಎಂಬ ಇಬ್ಬರೂ ವ್ಯಕ್ತಿಗಳು ಮಟ್ಕಾ ಸಂಖ್ಯೆ ಬರೆಯುತ್ತಿದ್ದರು, ಈ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಕುಂದಗೋಳ ಗ್ರಾಮೀಣ ಪೊಲೀಸರು ದಾಳಿ ನಡೆಸಿದಾಗ ನಾಗಾರಾಜ ಕ್ಷೀರಸಾಗರ ಎಂಬಾತನನ್ನು ಬಂಧಿಸಿ ಬಂಧಿತನಿಂದ 2350 ರೂಪಾಯಿ ನಗದು ಹಣ ಮಟ್ಕಾ ಬರೆಯಲು ಬಳಸುತ್ತಿದ್ದ ಪೆನ್ನು ಹಾಳೆ ವಶಪಡಿಸಿಕೊಂಡಿದ್ದು ಇನ್ನೋರ್ವ ಪರಾರಿಯಾಗಿದ್ದಾನೆ.

ಈ ಕುರಿತು ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By :
Kshetra Samachara

Kshetra Samachara

03/12/2021 12:26 pm

Cinque Terre

37.44 K

Cinque Terre

1

ಸಂಬಂಧಿತ ಸುದ್ದಿ