ಧಾರವಾಡ: ಬಡ್ಡಿ ಹಣಕ್ಕಾಗಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರೇ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದ್ದು, ಪೊಲೀಸರು ಮೂಕ ಪ್ರೇಕ್ಷಕರಾಗಿ ನೋಡುತ್ತ ನಿಂತಿದ್ದರು.
ಜಿಲ್ಲಾಧಿಕಾರಿ ಬಳಿ ಬಂದ ಏಳೆಂಟು ಜನ ಹಣದ ವ್ಯವಹಾರಕ್ಕಾಗಿ ವಾಗ್ವಾದ ನಡೆಸಿದರು. ಈ ವೇಳೆ ಪೊಲೀಸ್ ಕಾನ್‌ಸ್ಟೇಬಲ್ ಒಬ್ಬರು ಬಂದು ಇಲ್ಲಿಂದ ಆಕಡೆ ಹೋಗಿ ಇದು ಡಿಸಿ ಕಚೇರಿ ಎಂದು ಹೇಳಿದರೂ ಕೇಳದ ಆ ಗುಂಪು ಅಲ್ಲೇ ವಾಗ್ವಾದ ನಡೆಸಿತು.
ನಂತರ ಮಾತಿಗೆ ಮಾತು ಬೆಳೆದು ಎರಡೂ ಗುಂಪುಗಳ ಮಧ್ಯೆ ಜಿಲ್ಲಾಧಿಕಾರಿ ಕಚೇರಿ ಎದುರೇ ತೀವ್ರ ಮಾರಾಮಾರಿ ನಡೆದಿದೆ. ಇಷ್ಟೆಲ್ಲ ನಡೆಯುತ್ತ ನಿಂತಿದ್ದರೂ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪೊಲೀಸರು ಈ ದೃಶ್ಯವನ್ನು ನೋಡುತ್ತ ನಿಂತಿದ್ದರು.
ಹಣದ ವ್ಯವಹಾರಕ್ಕಾಗಿ ಈ ಗಲಾಟೆ ನಡೆದಿದೆ ಎನ್ನಲಾಗಿದೆ. ನಿನ್ನೆಯಷ್ಟೇ ಮೀಟರ್ ಬಡ್ಡಿ ಕಿರುಕುಳದಿಂದ ಬೇಸತ್ತು ಓರ್ವ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
Kshetra Samachara
30/11/2021 03:19 pm