ಹುಬ್ಬಳ್ಳಿ: ಕೀಲಿ ಹಾಕಿದ ಮನೆಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಆರೋಪಿ ಹಾಗೂ ಆತ ಕದ್ದ ಚಿನ್ನಾಭರಣ ಸ್ವೀಕರಿಸುತ್ತಿದ್ದ ಮೂವರನ್ನು ಕಸಬಾಪೇಟ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಒಟ್ಟು 3,80,000 ರೂ. ಮೌಲ್ಯದ 95 ಗಾಂ ಚಿನ್ನಾಭರಣ, 10,800 ರೂ. ಮೌಲ್ಯದ 183 ಗ್ರಾಂ ಬೆಳ್ಳಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಸ
ಕಸಬಾಪೇಟ, ಹಳೇ ಹುಬ್ಬಳ್ಳಿ ಗೌಸಿಯಾ ಟೌನ್, ಅಲ್ತಾಫ್ ಪ್ಲಾಟ್, ಈಶ್ವರ ನಗರ, ರಣದಮ್ಮ ಕಾಲೋನಿಯ ಐದು ಮನೆಗಳಲ್ಲಿ ಕಳ್ಳತನ ನಡೆದಿತ್ತು. ಸದ್ಯ ಕಸಬಾಪೇಟ ಠಾಣಿ ಇನ್‌ಸ್ಪೆಕ್ಟರ್ ಸುರೇಶ ಕುಂಬಾರ, ಪಿಎಸ್‌ಐ ಎಸ್.ಎಲ್. ಕಸ್ತೂರಿ ಹಾಗೂ ಸಿಬ್ಬಂದಿ ಆರೋಪಿಯನ್ನು ಬಂಧಿಸಿದ್ದಾರೆ. ಅಷ್ಟೇ ಅಲ್ಲದೆ ಕಳ್ಳನಿಂದ ಚಿನ್ನ ಸ್ವೀಕರಿಸುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಕಾರ್ಯಾಚರಣೆ ನಡೆಸಿದ ತಂಡದ ಕಾರ್ಯವನ್ನು ಆಯುಕ್ತ ಲಾಭೂರಾಮ ಶ್ಲಾಘಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Kshetra Samachara
26/11/2021 09:00 am