ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಾಡ್ಜ್ ನಲ್ಲಿದ್ದು ಗೋವಾ ಮದ್ಯ ಮಾರಾಟಕ್ಕೆ ಯತ್ನ: ಆರೋಪಿ ಬಂಧನ

ಹುಬ್ಬಳ್ಳಿ: ಲಾಡ್ಜ್ ‌ನಲ್ಲಿ ಉಳಿದುಕೊಂಡು ಅಕ್ರಮವಾಗಿ ಗೋವಾ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನ ಬಂಧಿಸುವಲ್ಲಿ ಅಬಕಾರಿ‌ ಪೊಲೀಸರು ಯಶಸ್ವಿಯಾಗಿದ್ದಾರೆ.

ಇಮ್ತಿಯಾಜ್ ಅಹ್ಮದ್ ಪೆನವಾಲ ಎಂಬಾತನೇ ಬಂಧಿತ ಆರೋಪಿಯಾಗಿದ್ದು, ಬಂಧಿತನಿಂದ 12 ಲೀಟರ್ ಗೋವಾ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ‌.‌

ಸ್ಟೇಷನ್ ರಸ್ತೆಯಲ್ಲಿಯ ಹೊಸ ಬಿ.ಎಸ್.ಎನ್.ಎಲ್. ಆಪೀಸ್ ನ ಎದುರುಗಡೆಯ ಕಟ್ಟಡದ 2ನೇ ಮಹಡಿಯಲ್ಲಿರುವ ಆರ್ಯದುರ್ಗ ಲಾಡ್ಜ್-ರೆಸಿಡೆನ್ಸಿಯ ರೂಮ್ ನಂ.39 ರಲ್ಲಿ ಇಮ್ತಿಯಾಜ್ ಅಹ್ಮದ್ ಪೆನವಾಲೆ ಮಾರಾಟ ಮಾಡುವ ಉದ್ದೇಶದಿಂದ‌ 12 ಲೀಟರ್ ಗೋವಾ ಮದ್ಯವನ್ನು ಸಂಗ್ರಹಿಸಿದ್ದ ಇದರ ಖಚಿತ ಮಾಹಿತಿ ಮೇಲೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Edited By :
Kshetra Samachara

Kshetra Samachara

13/11/2021 07:24 pm

Cinque Terre

26.65 K

Cinque Terre

4

ಸಂಬಂಧಿತ ಸುದ್ದಿ