ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜೂಜಾಡುತ್ತಿದ್ದ ಆರು ಜನ ಅಂದರ್: ಹಳೆ ಹುಬ್ಬಳ್ಳಿ ಪೊಲೀಸ್ ಕಾರ್ಯಾಚರಣೆ

ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ತಿಮ್ಮಸಾಗರದ ಅರಣ್ಯ ಇಲಾಖೆಯ ಜಾಗದಲ್ಲಿ ಬೆಳಿಗ್ಗೆ ಇಸ್ಪೀಟ್ ಜೂಜಾಡುತ್ತಿದ್ದ 6 ಜನರನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿತರಿಂದ 740 ರೂ. ನಗದು ವಶಪಡಿಸಿಕೊಂಡಿದ್ದಾರೆ.

ಬಾಷಿಕಟ್ಟೆಯ ಅಬಾರನವಾಸ ಕಿತ್ತೂರ, ಜವಳಿ ಫ್ಲಾಟ್‌ನ ನೌಕವಲಿ ನಾಯಕ, ಅಬ್ದುಲ್ ಮುದ್ದಲ್, ಫಾರೂಖ್ ಶೇಖ್, ಉಮರ ಫಾರೂಕ್‌ ಬಾಗಲಕೋಟ ಹಾಗೂ ಇಮ್ರಾನ್ ಬಶೀಬ ಬಂಧಿತ ಆರೋಪಿಗಳು, ಕುರುಚಲು ಅರಣ್ಯ ಪ್ರದೇಶದ ಮಧ್ಯದಲ್ಲಿಯ ಚಿಕ್ಕ ಬಯಲು ಜಾಗದಲ್ಲಿ ಅಂದರ್ ಬಾಹರ್ ಆಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ದಾಳಿ ನಡೆಸಿದ್ದರು. ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

Edited By : Nagaraj Tulugeri
Kshetra Samachara

Kshetra Samachara

06/11/2021 10:27 am

Cinque Terre

37.05 K

Cinque Terre

10

ಸಂಬಂಧಿತ ಸುದ್ದಿ