ಹುಬ್ಬಳ್ಳಿ: ಆಸ್ತಿ ವಿಚಾರಕ್ಕಾಗಿ ತಂದೆ-ತಾಯಿ ಮೇಲೆ ಪುತ್ರನೇ ಹಲ್ಲೆ ಮಾಡಿದ ಘಟನೆ ಹುಬ್ಬಳ್ಳಿಯ ಬಿಡ್ನಾಳದ ಮಾರುತಿ ನಗರದ ಹತ್ತಿರ ನಡೆದಿದೆ.
ಹಲ್ಲೆ ಮಾಡಿದ ಆರೋಪಿ ರೆಹಮತ್ ಮುಲ್ಲಾನವರ ತನ್ನ ಸ್ನೇಹಿತರನ್ನು ಕರೆದುಕೊಂಡು ಬಂದು, ತನ್ನ ತಂದೆ ಇಸ್ಮಾಯಿಲ ಸಾಬ ಮುಲ್ಲಾ ಮತ್ತು ತಾಯಿಗೆ ಮೂವರು ಸೇರಿ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ. ಅಲ್ಲದೇ ಕಲ್ಲಿನಿಂದ ಹೊಡೆದು ಹಲ್ಲೆ ಮಾಡಿದ್ದಾನೆ. ಈ ಕುರಿತು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಾಗಿ ಹುಡುಕಾಡುತ್ತಿದ್ದಾರೆ.
Kshetra Samachara
16/10/2021 09:58 am