ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಗಾಂಜಾ ಘಾಟಿಗೆ ಸೊಪ್ಪು ಹಾಕಿದ ಖಾಕಿ ಪಡೆ: ನವನಗರದ ಪಿಐ ಸೇರಿ ಏಳು ಜನ ಸಿಬ್ಬಂದಿ ಅಮಾನತು

ಹುಬ್ಬಳ್ಳಿ: ಛೋಟಾ ಮುಂಬೈ ಖ್ಯಾತಿಯ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಗಾಂಜಾ ಘಾಟು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಆದರೆ ಇದಕ್ಕೆ ಕಡಿವಾಣ ಹಾಕಬೇಕಿದ್ದ ಖಾಕಿಯೇ ಇದಕ್ಕೆ ಕೈ ಜೋಡಿಸಿದೆ. ಹಾಗಿದ್ದರೇ ಏನಿದು ಪ್ರಕರಣ ಅಂತ ನೀವು ನೋಡಲೇ ಬೇಕು..

ಗಾಂಜಾ ಮಾರಾಟ ಮಾಡುತ್ತಿದ್ದವರ ವಿರುದ್ಧ ಕಾರ್ಯಾಚರಣೆ ಮಾಡಿ ವಶಕ್ಕೆ ಪಡೆದುಕೊಂಡಿದ್ದ ಗಾಂಜಾ ಪ್ರಕರಣ ಮುಚ್ಚಿಹಾಕಿ, ವಶಪಡಿಸಿಕೊಂಡಿದ್ದ ಒಂದೂವರೆ ಕೆಜಿ ಗಾಂಜಾ ನಾಪತ್ತೆ ಮಾಡಿದ ಆರೋಪದ ಪ್ರಕರಣದಲ್ಲಿ ಎಪಿಎಂಸಿ- ನವನಗರ ಠಾಣೆಯ ಇನ್‌ಸ್ಪೆಕ್ಟರ್ ಸೇರಿ 7 ಪೊಲೀಸರನ್ನು ಅಮಾನತುಗೊಳಿಸಿ ಹೊರಡಿಸಿದ್ದಾರೆ.

ಎಪಿಎಂಸಿ-ನವನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ವಿಶ್ವನಾಥ ಚೌಗಲೆ, ಎಎಸ್‌ಐ ಕರಿಯಪ್ಪಗೌಡ, ಕಾನ್‌ಸ್ಟೇಬಲ್‌ಗಳಾದ ವಿಕ್ರಮ ಪಾಟೀಲ, ನಾಗರಾಜ, ಶಿವರಾಜಕುಮಾರ ಮೇತ್ರಿ ಹಾಗೂ ಗೋಕುಲ ರಸ್ತೆ ಠಾಣೆಯ ಮಹಿಳಾ ಕಾನ್‌ಸ್ಟೇಬಲ್ ದಿಲ್ಮಾದ, ಹೊನ್ನಪ್ಪನವರ ಎಂಬುವರು ಅಮಾನತಾಗಿರುವವರು.

ಗಾಂಜಾ ಮಾರಾಟಗಾರರ ಕುರಿತು ಸಾರ್ವಜನಿಕರೊಬ್ಬರು ಎಪಿಎಂಸಿ ಠಾಣೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಇದರ ಆಧಾರದ ಮೇಲೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದು, ಒಂದೂವರೆ ಕಿಲೋ ಗಾಂಜಾ ವಶಕ್ಕೆ ಪಡೆದಿದ್ದರು. ಆದರೆ, ಈ ಕುರಿತು ಪ್ರಕರಣ ದಾಖಲಿಸದೆ ಆರೋಪಿಗಳಿಂದ ಹಣ ಪಡೆದು ಕೈಬಿಟ್ಟಿದ್ದರು, ವಶಪಡಿಸಿಕೊಂಡಿದ್ದ ಗಾಂಜಾವನ್ನು ತಾವೇ ಮಾರಾಟ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಡಿಸಿಪಿ ಕೆ. ರಾಮರಾಜನ್ ಅವರಿಗೆ ತನಿಖೆ ಮಾಡಲು ಪೊಲೀಸ್ ಆಯುಕ್ತರು ಸೂಚಿಸಿದ್ದರು. ಡಿಸಿಪಿಯವರು ಸಲ್ಲಿಸಿದ ಆಯುಕ್ತರು ವರದಿ ಆಧಾರದ ಮೇಲೆ ಆಯುಕ್ತರು ಇನ್‌ಸ್ಪೆಕ್ಟರ್‌ ಸೇರಿ 7 ಪೊಲೀಸರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

Edited By :
Kshetra Samachara

Kshetra Samachara

10/10/2021 12:14 pm

Cinque Terre

78.27 K

Cinque Terre

22

ಸಂಬಂಧಿತ ಸುದ್ದಿ