ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗೋಮಾಳ ಜಮೀನಿನಲ್ಲಿ ಅಕ್ರಮವಾಗಿ ಮುರ್ರಂ ದಂಧೆ: ಗ್ರಾಮಸ್ಥರ ಆರೋಪ

ಧಾರವಾಡ: ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದ ಸರ್ವೆ ನಂಬರ್ 71 ರಲ್ಲಿ ಬರುವ ಗೋಮಾಳ ಜಾಗದಲ್ಲಿನ ಮುರ್ರಂನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಸರ್ವೆ ನಂಬರ್ 71ರಲ್ಲಿ ಬರುವ 21 ಎಕರೆ 10 ಗುಂಟೆ ಜಾಗದಲ್ಲಿನ ಮುರ್ರಂನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದರೂ ಗ್ರಾಮ ಪಂಚಾಯ್ತಿಯವರು ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೇ ಈ ದಂಧೆಯಿಂದಾಗಿ ಅಕ್ಕಪಕ್ಕದ ಹೊಲಗದ್ದೆಗಳಿಗೆ ಸಾಕಷ್ಟು ನಷ್ಟ ಉಂಟಾಗಿದೆ ಎಂದು ಮನಗುಂಡಿ ಗ್ರಾಮದ ಚನ್ನಬಸಪ್ಪ ಅಮ್ಮಿನಬಾವಿ ಆರೋಪಿಸಿದ್ದಾರೆ.

ಪ್ರತಿಷ್ಟಿತ ಗುತ್ತಿಗೆದಾರರೊಬ್ಬರು ತಾವರಗಟ್ಟಿ ಗ್ರಾಮದ ರಸ್ತೆ ನಿರ್ಮಾಣಕ್ಕಾಗಿ ಇಲ್ಲಿನ ಮುರ್ರಂನ್ನು ಸಾಗಿಸಿದ್ದಾರೆ. ಇದಕ್ಕೆ ಮನಗುಂಡಿ ಗ್ರಾಮದ ಕೆಲ ಪ್ರಮುಖ ರಾಜಕಾರಣಿಗಳು ಸಹ ಸಾಥ್ ನೀಡಿದ್ದಾರೆ. ಯಾವುದೇ ಪರವಾನಿಗಿ ಇಲ್ಲದೇ ಸರ್ಕಾರಿ ಗೋಮಾಳ ಜಮೀನಿನಲ್ಲಿನ ಮುರ್ರಂನ್ನು ಸಾಗಾಟ ಮಾಡಲಾಗುತ್ತಿದೆ ಎಂದು ಗ್ರಾಮ ಪಂಚಾಯ್ತಿಯವರಿಗೂ ಮಾಹಿತಿ ನೀಡಲಾಗಿದೆ. ಅಲ್ಲದೇ ತಹಶೀಲ್ದಾರರ ಗಮನಕ್ಕೂ ಇದನ್ನು ತರಲಾಗಿದೆ. ಆದರೆ, ಇಲ್ಲಿಯವರೆಗೂ ಯಾರೊಬ್ಬರ ಮೇಲೂ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಈಗಾಗಲೇ ಜೆಸಿಬಿಗಳಿಂದ ಸಾಕಷ್ಟು ಪ್ರಮಾಣದ ಮುರ್ರಂನ್ನು ಇಲ್ಲಿಂದ ಅಕ್ರಮವಾಗಿ ಸಾಗಿಸಲಾಗಿದೆ. ಸರ್ಕಾರಿ ಆಸ್ತಿಯನ್ನು ಈ ರೀತಿ ಲೂಟಿ ಮಾಡಲಾಗಿದೆ. ಅಲ್ಲದೇ ಮುರ್ರಂ ಹೇರಿದ್ದರಿಂದ ಪಕ್ಕದ ಜಮೀನುಗಳಿಗೆ ನೀರು ನುಗ್ಗಿ ಬೆಳೆ ನಾಶವಾಗಿದೆ. ಈ ಸಂಬಂಧ ಮೇಲಾಧಿಕಾರಿಗಳು ಕೂಡಲೇ ತಪ್ಪಿತಸ್ಥರ ಮೇಲೆ ಶಿಸ್ತು ಕ್ರಮ ಕೈಗೊಂಡು ಬೆಳೆ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ಒದಗಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

Edited By : Shivu K
Kshetra Samachara

Kshetra Samachara

07/10/2021 10:51 am

Cinque Terre

47.02 K

Cinque Terre

3

ಸಂಬಂಧಿತ ಸುದ್ದಿ