ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ತಾಲೂಕಿನ ಅಕ್ಕಿಗುಂದ ಹಾಗೂ ಚನ್ನಪಟ್ಟಣದಲ್ಲಿ ಅಕ್ರಮವಾಗಿ ಮರಳು ದಂಧೆ ನಡೆಯುತ್ತಿದ್ದು, ಶೆಟ್ಟಿಕೇರಿಯಿಂದ ಅಕ್ರಮವಾಗಿ ಟ್ರ್ಯಾಕ್ಟರಗಳ ಮೂಲಕ ಮರಳನ್ನು ಮಾಲ್ಕಿ ಜಮೀನುಗಳಲ್ಲಿ ಸಂಗ್ರಹಿಸಿ ಇಟ್ಟಿದರಿಂದ ಅರಣ್ಯ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಸಂಗ್ರಹಿಸಿ ಇಟ್ಟಿರುವ ಅಕ್ರಮ ಮರಳನ್ನು ನೆಲಸಮಗೊಳಿಸಿದರು.
ಗದಗ ಜಿಲ್ಲೆಯ ಚನ್ನಪಟ್ಟಣ ಹಾಗೂ ಅಕ್ಕಿಗುಂದದಲ್ಲಿ ದಿನನಿತ್ಯವೂ ಅಕ್ರಮವಾಗಿ ಮರಳನ್ನು ತೆಗೆದು ತಮ್ಮ ತಮ್ಮ ಮಾಲ್ಕಿ ಜಾಗದಲ್ಲಿ ಸಂಗ್ರಹಿಸಿ ಇಟ್ಟಿದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಮರಳನ್ನು ನೆಲಸಮಗೊಳಿಸಿದ್ದಾರೆ. ಸುಮಾರು ವರ್ಷಗಳಿಂದ ನಡೆಯುತ್ತಿದ್ದ ಮರಳು ದಂಧೆಯು ಏಕಾಏಕಿಯಾಗಿ ಅರಣ್ಯ ಇಲಾಖೆಯವರು ನೆಲಸಮಗೊಳಿಸಿದರಿಂದ ಇಷ್ಟು ದಿನದಿಂದ ಇಲ್ಲದ ಕಾಳಜಿ ಅರಣ್ಯ ಇಲಾಖೆಗೆ ಇಂದು ಎಲ್ಲಿದ್ದ ಬಂದಿದೆ ಏನೋ ಮಂತ್ಲಿ ಕೊಟ್ಟಿಲ್ಲ ಕಾಣುತ್ತದೆ ಎಂದು ಊರಿನ ಜನರು ಮಾತನಾಡುತ್ತಿದ್ದಾರೆ. ಇದೊಂದು ಕಡೆಯಾದರೆ ಅಕ್ಕಿಗುಂದ ಗ್ರಾಮದಲ್ಲಿ ಜಮೀನುಗಳಿಂದ ಮರಳನ್ನು ತೆಗೆದು ಮಾಲ್ಕಿ ಜಮೀನುಗಳಲ್ಲಿ ಹಾಕುತ್ತಿದ್ದರು ಲಕ್ಷ್ಮೇಶ್ವರ ತಹಶೀಲ್ದಾರರು ಮಾತ್ರ ಜಾಣ ಕುರುಡುತನ ತೊರುತ್ತಿದ್ದಾರೆ.
Kshetra Samachara
06/10/2021 05:08 pm