ಕುಂದಗೋಳ : ತನ್ನ ಮನೆಯ ಹಿತ್ತಲಿನಲ್ಲಿ ಅಕ್ರಮ ಮಾರಾಟಕ್ಕಾಗಿ ಗಾಂಜಾ ಬೆಳೆ ಬೆಳೆದಿದ್ದ ವ್ಯಕ್ತಿಯನ್ನು ಕುಂದಗೋಳ ಗ್ರಾಮೀಣ ಠಾಣಾ ಪೊಲೀಸರು ಮಂಗಳವಾರ ಮಧ್ಯಾಹ್ನದ ಅವಧಿಯಲ್ಲಿ ಬಂಧಿಸಿದ್ದಾರೆ. ಕಡಪಟ್ಟಿ ಗ್ರಾಮದ ಈರಪ್ಪ ರಾಯಪ್ಪ ಮಡಿವಾಳರ ಎಂಬಾತನೇ ತನ್ನ ಬಾಬತ್ತಿನ ಹಿತ್ತಲಿನಲ್ಲಿ 9ಕೆಜಿ 425 ಗ್ರಾಂ ತೂಕದ 35.000 ಸಾವಿರ ರೂಪಾಯಿ ಮೌಲ್ಯದ ಗಾಂಜಾ ಬೆಳೆ ಬೆಳೆದಿದ್ದಾನೆ.
ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು ಅಕ್ರಮ ಗಾಂಜಾ ಸಮೇತ ಆರೋಪಿಯನ್ನು ಬಂಧಿಸಿದ್ದು ಪ್ರಕರಣದ ಕುರಿತಂತೆ ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
06/10/2021 04:31 pm