ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೈತರಿಂದ 50 ಸಾವಿರ ಲಂಚದ ಹಣಕ್ಕೆ ಬೇಡಿಕೆ ಇಟ್ಟ ಅಧಿಕಾರಿ ಅಂದರ್

ಕುಂದಗೋಳ : ರೈತರೊಬ್ಬರ ಹೊಲದ ಬೋಜಾ ಕಡಿಮೆ ಮಾಡಲು 50.000 ಹಣಕ್ಕೆ ಬೇಡಿಕೆ ಇಟ್ಟಿದ್ದ ಕುಂದಗೋಳ ತಹಶೀಲ್ದಾರ ಕಚೇರಿಯ ಕಂದಾಯ ನಿರೀಕ್ಷಕ ಇಂದು ಹಣ ಪಡೆಯುವ ವೇಳೆಯ ಎಸಿಬಿ ಬೆಲೆಗೆ ಬಿದ್ದಿದ್ದಾರೆ.

ಕುಂದಗೋಳ ಮತಕ್ಷೇತ್ರದ ಶರೇವಾಡ ಗ್ರಾಮದ ಲೋಚನಪ್ಪ ಗೊಳಲಕೇರಿ ಎಂಬ ರೈತರು 2014 ಸಾಲಿನಲ್ಲಿ ಕುಂದಗೋಳ ಗ್ರಾಮದ ಸರ್ವೆ ನಂಬರ್ 268/4 ರಲ್ಲಿ 4 ಎಕರೆ 27 ಗುಂಟೆ ಜಮೀನನ್ನು ಖರೀದಿಸಿದ್ದು, ಆ ಜಮೀನಿನ ಬೋಜಾ ಕಡಿಮೆ ಮಾಡಲು ತಹಶೀಲ್ದಾರ ಇಲಾಖೆಗೆ ಅರ್ಜಿ ಸಲ್ಲಿಸಿದಾಗ ಕಂದಾಯ ನಿರೀಕ್ಷಕ 50.000 ರೂಪಾಯಿ ಲಂಚದ ಹಣಕ್ಕೆ ಬೇಡಿಕೆ ಇಟ್ಟು ಕೊನೆಗೆ 35.000 ಹಣಕ್ಕೆ ಕೆಲಸ ಮಾಡಿ ಕೊಡುವುದಾಗಿ ಒಪ್ಪಿಕೊಂಡಿದ್ದರು.

ಇಂದು ಕಂದಾಯ ನಿರೀಕ್ಷಕ ಸದಾನಂದ ದೇಮಣ್ಣನವರ ಹುಬ್ಬಳ್ಳಿಯ ಕಾಮತ್ ಹೋಟೆಲ್ ತೆರಳಿ ಜಮೀನಿನ ಮಾಲೀಕರಿಂದ ಲಂಚ ಸ್ವೀಕರಿಸುವ ವೇಳೆ ಎಸಿಬಿ ಅಧಿಕಾರಿಗಳು ಅಪರಾಧ ಕಾಲದಲ್ಲಿಯೆ ಲಂಚದ ಹಣದ ಸಮೇತ ಆರೋಪಿಯನ್ನು ಬಂಧಿಸಿದ್ದು ತನಿಖೆ ಮುಂದುವರಿದಿದೆ. ಈ ಅಪರಾಧ ಪ್ರಕರಣದಲ್ಲಿ ಎಸಿಬಿ ಅಧಿಕಾರಿಗಳಾದ ಬಿ.ಎಸ್.ನೇಮಗೌಡ, ವ್ಹಿ.ಎನ್.ಕಡಿ ಪಿಐ ತನಿಖೆ ಮಾಡಿದ್ದು ಇತರರು ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ನಿರ್ವಹಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

28/09/2021 05:30 pm

Cinque Terre

28.29 K

Cinque Terre

9

ಸಂಬಂಧಿತ ಸುದ್ದಿ