ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ನೀರಸಾಗರ ಕೋಡಿಯ ನೀರಿನಲ್ಲಿ ಯುವಕ ಸಾವು ಪ್ರಕರಣಕ್ಕೆ ಟ್ವಿಸ್ಟ್: ಮೂವರ ಮೇಲೆ ಕೊಲೆ ಪ್ರಕರಣ ದಾಖಲು

ಕಲಘಟಗಿ: ತಾಲೂಕಿನ ನೀರಸಾಗರ ಕೆರೆಯಲ್ಲಿ ಕೋಡಿಯ ನೀರಿನಲ್ಲಿ ಯುವಕ ಮುಳುಗಿರುವ ಘಟನೆಗೆ ತಿರುವು ಪಡೆದುಕೊಂಡಿದ್ದು, ಮೂವರ ಮೇಲೆ ಕೊಲೆ ಪ್ರಕರಣ ದಾಖಲಿಸಲಾಗಿದೆ.

ಆಟೋ ರೀಕ್ಷಾವನ್ನು ಬಾಡಿಗೆಗೆ ಎಂದು ಕರೆದುಕೊಂಡು ಬಂದಿದ್ದಲ್ಲದೇ,ಈ ಹಿಂದೆ ಆರೋಪಿ ನವೀನ ಮೆಹರವಾಡೆ ಇತನಿಗೆ ಕೊಲೆಯಾದ ಪೃಥ್ವಿ ಹೊಡೆದ ಸಿಟ್ಟಿನಿಂದ ಸಂಚು ರೂಪಿಸಿ,ಆತನನ್ನು ಕೊಲೆ ಮಾಡುವ ಉದ್ದೇಶದಿಂದ ಕೆರೆಗೆ ಕರೆದುಕೊಂಡು ಬಂದು ಹತ್ಯೆ ಮಾಡಿ ಪರಿಶಿಷ್ಟ ಪಂಗಡಕ್ಕೆ ದೌರ್ಜನ್ಯ ಮಾಡಿದ್ದಾರೆ ಎಂದು ಹುಬ್ಬಳ್ಳಿಯ ರಾಹುಲ ಕರಾಟೆ,ತರುಣ ಸೂರ್ಯವಂಶಿ,ನವೀನ ಮೆಹರವಾಡೆ ಎಂಬವರ ಮೇಲೆ ಮೃತನ ತಂದೆ ಶೇಖರ ಪಿರ್ಯಾದಿ (ದೂರು) ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸ್ ಇನ್ಸ್ಪೆಕ್ಟರ್ ಪ್ರಭು ಸೂರಿನ ಸ್ಥಳಕ್ಕೆ ಭೇಟಿ ನೀಡಿ ತೀವ್ರ ತನಿಖೆ ನಡೆಸಿದ್ದಾರೆ.

Edited By : Shivu K
Kshetra Samachara

Kshetra Samachara

28/09/2021 10:23 am

Cinque Terre

45.39 K

Cinque Terre

3

ಸಂಬಂಧಿತ ಸುದ್ದಿ