ಗದಗ: ಕುರಿಗಾಹಿಗಳ ಮೇಲೆ ಹಲ್ಲೆ ಮಾಡಿ 50 ಕ್ಕೂ ಹೆಚ್ಚು ಕುರಿ ಕಳ್ಳತನ ಮಾಡಿದ ಘಟನೆ ಗದಗ ಜಿಲ್ಲೆಯ ರೋಣ ತಾಲೂಕಿನ ಅಸೂಟಿ ಗ್ರಾಮದಲ್ಲಿ ನಡೆದಿದೆ.
ಬಾಲಪ್ಪ ಹುಡೇದ್ ಎಂಬ ಕುರಿಗಾಹಿಗೆ ಸೇರಿದ ಕುರಿಗಳನ್ನು ಕಳ್ಳತನ ಮಾಡಲಾಗಿದೆ. ಕುರಿಗಾಹಿ ಬಾಲಪ್ಪ ಹಾಗೂ ಅವನ ಮಗನ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿಗಳು, ಕಾಲು ಕೈ ಕಟ್ಟಿ ಹಾಕಿ ಕುರಿಗಾಹಿ ಬಾಲಕನ ಮೇಲೆ ಹಲ್ಲೆ ಮಾಡಿದ್ದಾರೆ.
ನಿನ್ನೆ ರಾತ್ರಿ ಕುರಿ ದಡ್ಡಿಗೆ ಬಂದ ಖದೀಮರು, ಕುರಿಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ರೋಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Kshetra Samachara
25/09/2021 09:18 pm